Thursday, June 4, 2026
Homeಕರಾವಳಿಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದ ಕಾರು!

ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದ ಕಾರು!

- Advertisement -
- Advertisement -

ಪುತ್ತೂರು: ಹಾರಿದ ಕಾರು ಹೊಳೆಗೆ ಬಿದ್ದ ಘಟನೆ ಇಂದು ಸಂಜೆ ನಡೆದಿದೆ. ಸುಳ್ಯದಿಂದ ಪುತ್ತೂರುಗೆ ಹೋಗತಿದ್ದ ಆಲ್ಟೋ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಹೊಳೆಗೆ ಹಾರಿರುವ ಘಟನೆ ಕಾವು ಮಿನೋಜಿಕಲ್ ಸಮೀಪ ಕೌಡಿಚ್ಚಾರ್ ಸೇತುವೆಯಲ್ಲಿ ನಡೆದಿದೆ.

ಕಾರಿನಲ್ಲಿದ್ದ ಚಾಲಕ ಸಿದ್ದಿಕ್ ಪಲ್ಲತ್ತೂರು ಹಾಗೂ ಜತೆಗಿದ್ದ ನಿಸಾರ್ ಬಾರೆಬೆಟ್ಟು ಅಲ್ಪಸ್ವಲ್ಪ ಗಾಯಗೊಂಡು ಪುತ್ತೂರಿನ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಅಪಘಾತಗಳ ವಲಯ ಎಂದೇ ಬಿಂಬಿತವಾಗಿರುವ ಈ ಪ್ರದೇಶ ಒಂದು ವಾರದಿಂದೀಚೆಗೆ ನಡೆದ ನಾಲ್ಕನೇ ಅಪಘಾತ ಇದಾಗಿದೆ. ಸೇತುವೆಯ ತಡೆಗೋಡೆಗೆ ಈ ಹಿಂದೆ ಲಾರಿ ಗುದ್ದಿದ ಪರಿಣಾಮ ತಡೆಗೋಡೆ ಕುಸಿತಗೊಂಡಿದ್ದು ,ಇದನ್ನು ಮರು ನಿರ್ಮಾಣ ಮಾಡದಿರುವುದು ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!