Wednesday, June 3, 2026
Homeಕರಾವಳಿಕೋವಿಡ್ ಕಾರಣದಿಂದ ಪ್ರಧಾನಿ ಕಾರ್ಯಕ್ರಮಕ್ಕೆ ಶಾಸಕ ಖಾದರ್ ಗೈರು; ಕರಾವಳಿಯಲ್ಲಿ ಕೇಳಿ ಬರುತ್ತಿದೆ ಹೀಗೊಂದು ಗುಸು...

ಕೋವಿಡ್ ಕಾರಣದಿಂದ ಪ್ರಧಾನಿ ಕಾರ್ಯಕ್ರಮಕ್ಕೆ ಶಾಸಕ ಖಾದರ್ ಗೈರು; ಕರಾವಳಿಯಲ್ಲಿ ಕೇಳಿ ಬರುತ್ತಿದೆ ಹೀಗೊಂದು ಗುಸು ಗುಸು ಚರ್ಚೆ

- Advertisement -
- Advertisement -

ಮಂಗಳೂರು; ಇಂದು ನಡೆದ ಪ್ರಧಾನಿ ಕಾರ್ಯಕ್ರಮದಲ್ಲಿ ಕರಾವಳಿಯ ಬಹುತೇಕ ಶಾಸಕರು ಭಾಗಿಯಾಗಿದ್ದರು. ಆದರೆ ಉಳ್ಳಾಲ ಶಾಸಕ ಯು.ಟಿ. ಖಾದರ್ ಅವರು ಕೋವಿಡ್ ಪಾಸಿಟಿವ್ ಆಗಿರುವ ಹಿನ್ನೆಲೆ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ. ಖಾದರ್ ಗೈರು ಇದೀಗ ಒಂದಷ್ಟು ಗುಸು ಗುಸು ಚರ್ಚೆಗೆ ಕಾರಣವಾಗಿದೆ.

ಯು ಟಿ ಖಾದರ್ ಅವರು ಬೇಕು ಅಂತಲೇ ಕೋವಿಡ್ ಕಾರಣ ನೀಡಿ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಇಲ್ಲವೋ ಪಕ್ಷದಿಂದ ಬಂದ ಸೂಚನೆಯಂತೆ ಕೋವಿಡ್ ಕಾರಣ ನೀಡಿ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ ಎಂಬ ಮಾತುಗಳು ಕೇಲಿ ಬರುತ್ತಿದೆ.

ಇನ್ನು ಮೊನ್ನೆ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ ಶಾಸಕ ಖಾದರ್ ಅವರು ನನಗೆ ಮೋದಿ ಕಾರ್ಯಕ್ರಮಕ್ಕೆ ಆಹ್ವಾನ ಬಂದಿಲ್ಲ ಎಂಬ ಮಾತುಗಳನ್ನು ಹೇಳಿದ್ದರು. ಅದರ ಬೆನ್ನಲ್ಲೇ ಖಾದರ್ ಅವರು ಇಂದಿನ ಕಾರ್ಯಕ್ರಮಕ್ಕೆ ಗೈರಾಗಿರೋದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

- Advertisement -

Latest News

error: Content is protected !!