Sunday, June 7, 2026
Homeಕರಾವಳಿಉಡುಪಿಕುಂದಾಪುರ: ನದಿಯಲ್ಲಿ ಮುಳುಗಿ ಇಬ್ಬರು ಯುವಕರ ಸಾವು!

ಕುಂದಾಪುರ: ನದಿಯಲ್ಲಿ ಮುಳುಗಿ ಇಬ್ಬರು ಯುವಕರ ಸಾವು!

- Advertisement -
- Advertisement -

ಕುಂದಾಪುರ: ನಗರದ ಅಲ್ಬಾಡಿ ಗ್ರಾಮದ ಗಂಟುಬೀಲು ಸಮೀಪ ಕೃಷಿ ಕೆಲಸದಲ್ಲಿ ನಿರತರಾಗಿದ್ದ ಇಬ್ಬರು ಯುವಕರು ಆಕಸ್ಮಿಕವಾಗಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಮೃತಪಟ್ಟ ಯುವಕರನ್ನು ಅಲ್ಬಾಡಿ ಗ್ರಾಮದ ಮೋಹನ್ ನಾಯ್ಕ್ (21) ಮತ್ತು ಮಹಾಬಲ ನಾಯ್ಕ್ ಅವರ ಮಗ ಸುರೇಶ್ (19) ಎಂದು ಗುರುತಿಸಲಾಗಿದೆ.

ಮೃತಪಟ್ಟ ಇಬ್ಬರೂ ಬಡ ಕುಟುಂಬದವರಾಗಿದ್ದು, ಇಬ್ಬರು ಕೂಲಿ ಕೆಲಸ ಮಾಡುತ್ತಿದ್ದರು. ಗಂಟುಬೀಲು ಕೃಷ್ಣ ನಾಯಕ್ ಅವರಿಗೆ ಸೇರಿದ ತೋಟಕ್ಕೆ ಸೋಮವಾರ ಕೂಲಿ ಕೆಲಸ ಮಾಡಲು ಹೋಗಿದ್ದು, ಬಳಿಕ ತಡವಾದರೂ ಹಿಂದಿರುಗದ ಹಿನ್ನಲೆಯಲ್ಲಿ ಹುಡುಕಾಟ ಆರಂಭಿಸಿದ್ದಾರೆ.ಈ ವೇಳೆ ಅವರ ಮೃತದೇಹ ನದಿಯಲ್ಲಿ ಪತ್ತೆಯಾಗಿವೆ.

ಇಬ್ಬರೂ ಒಟ್ಟಿಗೆ ನದಿಗೆ ಹೋದರೋ ಅಥವಾ ಇನ್ನೊಬ್ಬರು ಅಪಾಯದಲ್ಲಿದ್ದ ವ್ಯಕ್ತಿಯ ಜೀವವನ್ನು ಉಳಿಸಲು ಪ್ರಯತ್ನಿಸುವಾಗ ಮೃತಪಟ್ಟಿದ್ದಾರೋ ಯಾರಿಗೂ ತಿಳಿದಿಲ್ಲ

ಮೃತರಾದ ಮೋಹನ್ ನಾಯ್ಕ್ ತನ್ನ ತಾಯಿ, ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ ಮತ್ತು ಸುರೇಶ್ ನಾಯ್ಕ್ ಪೋಷಕರು ಮತ್ತು ಸಹೋದರನನ್ನು ಅಗಲಿದ್ದಾರೆ.

- Advertisement -

Latest News

error: Content is protected !!