Tuesday, June 30, 2026
Homeಅಪರಾಧಸ್ಯಾಂಡಲ್ ವುಡ್ ನಶೆ ರಾಣಿಯರ ಸತ್ಯ ಬಯಲು: ನಟಿ ಸಂಜನಾ, ರಾಗಿಣಿ ಡ್ರಗ್ಸ್ ಸೇವಿಸಿರುವುದು ಖಚಿತ!

ಸ್ಯಾಂಡಲ್ ವುಡ್ ನಶೆ ರಾಣಿಯರ ಸತ್ಯ ಬಯಲು: ನಟಿ ಸಂಜನಾ, ರಾಗಿಣಿ ಡ್ರಗ್ಸ್ ಸೇವಿಸಿರುವುದು ಖಚಿತ!

- Advertisement -
- Advertisement -

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಪ್ರಕರಣ ಮತ್ತೆ ಜೀವ ಪಡೆದುಕೊಂಡಿದ್ದು,ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾಣಿ ಡ್ರಗ್ಸ್ ತೆಗೆದುಕೊಂಡಿರುವುದು ದೃಢವಾಗಿದೆ.

ಸಿ ಎಫ್ ಎಸ್ ಎಲ್ ಪರೀಕ್ಷೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗಗೊಂಡಿದ್ದು, ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ಹಾಗೂ ವಿರೇನ್ ಖನ್ನಾ ಅವರು ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ.

ತಲೆ ಕೂದಲು ಪರೀಕ್ಷೆಯಲ್ಲಿ ಇವರು ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ. ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಟಿ ರಾಗಿಣಿ, ಸಂಜನಾ ಸೇರಿದಂತೆ ಎಲ್ಲಾ ಆರೋಪಿಗಳಿಗೂ ಸಂಕಷ್ಟ ಎದುರಾಗಿದೆ.ಇನ್ನು ರಾಗಿಣಿ ಹಾಗೂ ಸಂಜನಾ ಸ್ನೇಹಿತರಾದ ರಾಹುಲ್ ತೋನ್ಸೆ, ರವಿಶಂಕರ್, ಲೂಮ್ ಪೆಪ್ಪರ್ ಕೂಡ ಡ್ರಗ್ಸ್ ಸೇವಿಸಿರುವುದು ವರದಿಯಲ್ಲಿ ದೃಢವಾಗಿದೆ.

ಸಿಸಿಬಿ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದು, ನಟಿಯರ ತಲೆ ಕೂದಲು ಸೇರಿದಂತೆ ವಿವಿಧ ಮಾದರಿ ಸಂಗ್ರಹಿಸಿ ಸಿ ಎಫ್ ಎಸ್ ಎಲ್ ಪರೀಕ್ಷೆಗೆ ಕಳುಹಿಸಲಾಗಿತ್ತು, ಇದೀಗ ಪರೀಕ್ಷೆಯ ವರದಿ ಬಂದಿದ್ದು, ವರದಿಯಲ್ಲಿ ನಟಿಯರು ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ

- Advertisement -

Latest News

error: Content is protected !!