- Advertisement -
- Advertisement -
ಉಡುಪಿ: ಲಾರಿಯಿಂದ ಗ್ರಾನೈಟ್ ಅನ್ ಲೋಡ್ ಮಾಡುವಾಗ ಅವಘಡ ಸಂಭವಿಸಿ ಇಬ್ಬರು ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.
ಮಲ್ಪೆಯ ತೊಟ್ಟಂ ಸಮೀಪದಲ್ಲಿ ಈ ದುರಂತ ಸಂಭವಿಸಿದ್ದು, ಮೃತಪಟ್ಟವರಿಬ್ಬರು ಉತ್ತರ ಪ್ರದೇಶ ಮೂಲದ ಕೂಲಿ ಕಾರ್ಮಿಕರಾಗಿದ್ದಾರೆ.
ಭಾರೀ ಗಾತ್ರದ ಗ್ರಾನೈಟ್ ಅನ್ನು ಲಾರಿಯಿಂದ ಅನ್ ಲೋಡ್ ಮಾಡುತ್ತಿದ್ದ ವೇಳೆ ಗ್ರಾನೈಟ್ ಅಡಿಯಲ್ಲಿ ಸಿಲುಕಿ ಹಾಕಿಕೊಂಡು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಮಲ್ಪೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- Advertisement -