Saturday, June 13, 2026
Homeಕರಾವಳಿಮಂಗಳೂರುನರೇಂದ್ರ ಮೋದಿ ರೋಡ್ ಶೋ ಗಾಗಿ ಸಿದ್ಧವಾಗಿದೆ 2 ಟನ್ ಹೂವಿನ ಎಸಳು

ನರೇಂದ್ರ ಮೋದಿ ರೋಡ್ ಶೋ ಗಾಗಿ ಸಿದ್ಧವಾಗಿದೆ 2 ಟನ್ ಹೂವಿನ ಎಸಳು

- Advertisement -
- Advertisement -

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಇಂದು ಚುನಾವಣಾ ಪ್ರಚಾರ ನಡೆಸಲಿದ್ದು ರಾತ್ರಿ ಮಂಗಳೂರು ನಗರದಲ್ಲಿ ರೋಡ್ ಶೋ ನಡೆಯಲಿದೆ.

ನರೇಂದ್ರ ಮೋದಿ ರೋಡ್ ಶೋ ಗಾಗಿ ಎರಡು ಟನ್ ಹೂವಿನ ಎಸಳುಗಳನ್ನು ಸಿದ್ದಪಡಿಸಲಾಗಿದ್ದು, ರೋಡ್ ಶೋ ವೇಳೆ ಪ್ರಧಾನಮಂತ್ರಿ ಸಾಗುವ ಮಾರ್ಗದಲ್ಲಿ ಪುಷ್ಪ ವೃಷ್ಟಿಗಾಗಿ ಎರಡು ಟನ್ ಚೆಂಡು ಹೂವನ್ನು ಕೋಲಾರದಿಂದ ತರಿಸಲಾಗಿದೆ.

ಮಂಗಳೂರಿನಲ್ಲಿರುವ ಆರ್ ಎಸ್ ಎಸ್ ಕಾರ್ಯಾಲಯ ಸಂಘ ನಿಕೇತನದಲ್ಲಿ ಹೂವಿನ ಎಸಳುಗಳನ್ನು ಬಿಡಿಸಿ ಸಿದ್ಧತೆ ಮಾಡಲಾಗಿದೆ.

ನಾರಾಯಣಗುರು ವೃತ್ತದಿಂದ ನವಭಾರತ್ ವೃತ್ತದವರೆಗೆ ರೋಡ್ ಶೋ ವೇಳೆ ಪ್ರಧಾನಿ ವಾಹನದತ್ತ ಪುಷ್ಪವೃಷ್ಟಿ ಮಾಡಲು ಹೂವಿನ ಎಸಳುಗಳ ವಿತರಣೆ ನಡೆಯಲಿದೆ.

- Advertisement -

Latest News

error: Content is protected !!