Thursday, June 4, 2026
Homeಕರಾವಳಿಪ್ರತ್ಯೇಕ ಪ್ರಕರಣ: ಉಪ್ಪಿನಂಗಡಿಯಲ್ಲಿ ಇಬ್ಬರು ಆತ್ಮಹತ್ಯೆಗೆ ಶರಣು!

ಪ್ರತ್ಯೇಕ ಪ್ರಕರಣ: ಉಪ್ಪಿನಂಗಡಿಯಲ್ಲಿ ಇಬ್ಬರು ಆತ್ಮಹತ್ಯೆಗೆ ಶರಣು!

- Advertisement -
- Advertisement -

ಉಪ್ಪಿನಂಗಡಿ: ಇಬ್ಬರು ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತಪಟ್ಟವರನ್ನು ಬಾರ್ಯ ಗ್ರಾಮದ ಅಜೀರ ನಿವಾಸಿ ಡೀಕಯ್ಯ ಗೌಡ ಎಂದು ತಿಳಿದು ಬಂದಿದೆ. ಇವರು ಸೆ.19 ರಂದು ತನ್ನ ಮನೆಯ ಬಾತ್‌ರೂಂನಲ್ಲಿ ಹುಲ್ಲು ಸಾಯಲೆಂದು ತಂದಿಟ್ಟ ವಿಷ ಪದಾರ್ಥವನ್ನು ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದರು.ಬಳಿಕ ಅವರನ್ನು ಉಪ್ಪಿನಂಗಡಿ, ಪುತ್ತೂರು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸೆ.20ರಂದು ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಇನ್ನೊಂದು ಘಟನೆ ಬಿಳಿಯೂರು ಗ್ರಾಮದಲ್ಲಿ ಸೆ.20 ರಂದು ನಡೆದಿದೆ.

ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದ ಪುರಿಯಾ ನಿವಾಸಿ ಗಿರೀಶ್ (29) ರವರು ಮಧ್ಯದ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಪೆಗೊಂಡು ಸೆ.19ರಂದು ರಾತ್ರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಬೆಳಗ್ಗೆ ಬಾವಿಯಲ್ಲಿ ಶವ ಪತ್ತೆಯಾಗಿದೆ.

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಳಗ್ಗೆ ಬಾವಿಯಲ್ಲಿ ಗಿರೀಶ್ ಅವರ ಮೃತದೇಹ ಕಂಡು ಬಂದರೂ, ಮೃತದೇಹ ಮೇಲೆತ್ತಲು ಯಾರೂ ಮುಂದಾಗಲಿಲ್ಲ. ಬಳಿಕ ಹಿರೇಬಂಡಾಡಿಯ ಅಬ್ದುರಹ್ಮಾನ್ ಅಡೆಕ್ಕಲ್ ಹಾಗೂ ಕೊಯಿಲದ ಆಸೀಫ್ ಅವರು ತೆರಳಿ ಮೃತದೇಹವನ್ನು ಮೇಲೆತ್ತಿದರು.

- Advertisement -

Latest News

error: Content is protected !!