ಮಂಗಳೂರು; ಮಾದಕ ವಸ್ತು ಸಾಗಾಟ ಮತ್ತು ಮಾರಾಟ ಪ್ರಕರಣದಲ್ಲಿ ಹೊರ ರಾಜ್ಯದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.ಬಿಹಾರದ ನಳಂದ ಜಿಲ್ಲೆಯ ಹರ್ಷ ಕುಮಾರ್ (22), ಬಿಹಾರದ ವೈಶಾಲಿ ಜಿಲ್ಲೆ ನಿವಾಸಿ ಅಮರ್ ಕುಮಾರ್ (28) ಬಂಧಿತ ಆರೋಪಿಗಳು.
ಪ್ರಕರಣದ ವಿವರ:
ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ 62 ನೇ ತೋಕೂರು ಗ್ರಾಮದ, ತೋಕೂರು ರೈಲ್ವೇ ಸ್ಟೇಶನ್ ಬಳಿ ಸಾರ್ವಜನಿಕರು ಓಡಾಡುವ ರಸ್ತೆಯ ಬದಿಯಲ್ಲಿ ಇಬ್ಬರು ಯುವಕರು ಮಾದಕ ವಸ್ತು ವಶದಲ್ಲಿ ಹೊಂದಿ ಮಾರಾಟ ಮಾಡುತ್ತಿರುವ ಬಗ್ಗೆ ಪಣಂಬೂರು ಠಾಣಾ ಪಿಎಸ್ಐ ಜ್ಞಾನಶೇಖರರವರಿಗೆ ಸಿಕ್ಕ ಖಚಿತ ಮಾಹಿತಿಯಂತೆ ಜ್ಞಾನಶೇಖರ ಅವರು ತಮ್ಮ ಸಿಬ್ಬಂದಿ ಜೊತೆ ದಿನಾಂಕ: 01-09-2025 ರಂದು ಸಂಜೆ 4-40 ರ ವೇಳೆಗೆ ದಾಳಿ ಮಾಡಿದ್ದು ಆರೋಪಿ ಹರ್ಷ ಕುಮಾರ್ ಎಂಬಾತನಿಂದ 1 ಕೆ ಜಿ 230 ಗ್ರಾಂ ಮತ್ತು ಅಮರ್ ಕುಮಾರ್ ಎಂಬಾತನಿಂದ 80 ಗ್ರಾಂ ಗಾಂಜಾ ಮಾದಕ ವಸ್ತುವನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ. ಇದರ ಮೌಲ್ಯ ಸುಮಾರು 75,000/- ರೂಪಾಯಿಗಳಷ್ಟು ಆಗಿರುತ್ತದೆ. ಆರೋಪಿತರು ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ಮಾದಕ ವಸ್ತುಗಳನ್ನು ಮಾರಾಟ ಮಾಡುವ ಸಲುವಾಗಿ ಉಪಯೋಗಿಸುತ್ತಿದ್ದ ೦2 ಮೊಬೈಲ್ಗಳನ್ನು ಸ್ವಾಧೀನಪಡಿಸಲಾಗಿದೆ. ಆರೋಪಿಗಳ ಪೈಕಿ ಒಬ್ಬಾತನು ಬಿಹಾರದ ಪಟ್ನಾದಲ್ಲಿ ಮೀಶೋ ಮತ್ತು ಫ್ಲಿಫ್ ಕಾರ್ಟ್ ಹಬ್ ನಲ್ಲಿ ಮತ್ತು ಇನ್ನೊಬ್ಬಾತ ದೆಹಲಿಯಲ್ಲಿ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿರುವುದಾಗಿದೆ. ಆರೋಪಿಗಳ ವಿರುದ್ದ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.


