ಬಂಟ್ವಾಳ : ಗಾಂಜಾ ಸಾಗಾಟ ಮಾಡಲು ಯತ್ನಿಸಿದ ಪ್ರಕರಣ ಸಂಬಂಧಿಸಿದಂತೆ ಮತ್ತೆ ಗಾಂಜಾ ಸಮೇತ ಇಬ್ಬರು ಆರೋಪಿಗಳನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಟ್ವಾಳ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಂದೀಪ್ ಕುಮಾರ್ ರೌಂಡ್ಸ್ ವೇಳೆ ಬೈಕ್ ನಲ್ಲಿ ಹೆಲ್ಮೆಟ್ ಧರಿಸದೆ ಗೂಡಿನಬಳಿ ಸಂಚಾರ ಮಾಡುತ್ತಿದ್ದಾಗ ಅ.8 ರಂದು ಬೆಳಗ್ಗೆ ಬೆನ್ನಟ್ಟಿ ಹಿಡಿದು ವಿಚಾರಣೆ ವೇಳೆ ಗಾಂಜಾ ಸಾಗಾಟ ಮಾಡುವಾಗ ಅಬಕಾರಿ ದಳದ ಕಾರ್ಯಾಚರಣೆ ವೇಳೆ ಪಿಕಪ್ ವಾಹನದಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಪರಾರಿಯಾಗಿದ್ದ ಬೈಕ್ ಸಹಸವಾರ ಆರೋಪಿಯಾದ ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಗ್ರಾಮದ ಗಾಂಧಿನಗರ ನಿವಾಸಿ ಇಬ್ರಾಹಿಂ ಮಗ ಅಬ್ದುಲ್ ಸಾಧಿಕ್(40) ಎಂಬಾತನಾಗಿದ್ದು ಮತ್ತೊಬ್ಬ ಬೈಕ್ ಸವಾರ ಸಜೀಪನಡು ಗ್ರಾಮ ಕಂಚಿನಡ್ಕಪದವು ನಿವಾಸಿ ಶೆಕ್ಕಬ್ಬ ಮಗ ಅಬ್ದುಲ್ ಮಾಜೀದ್(34) ಬಳಿಯಿದ್ದ 8.790 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದು ಜೈಲಿಗಟ್ಟಿದ್ದರು. ಈ ಪ್ರಕರಣದಲ್ಲಿ ಮುಂದುವರೆದು ಇತರೆ ಗಾಂಜಾವನ್ನು ಬೇರೆಯವರಿಗೆ ಮಾರಾಟ ಮಾಡಿದ್ದ ಬಗ್ಗೆ ತನಿಖೆ ವೇಳೆ ಆರೋಪಿಗಳು ಬಾಯಿಟ್ಟಿದ್ದರು.
ಬಂಟ್ವಾಳ ನಗರ ಪೊಲೀಸರ ತಂಡ ಅ.10 ರಂದು ಫರಂಗಿಪೇಟೆಯ ಬಳಿ ಬೈಕ್ ನಲ್ಲಿ ಬರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿ ಫರಂಗಿಪೇಟೆ ನಿವಾಸಿ ಅಮ್ಮೆಮಾರ್ ಹಸನಬ್ಬ ಮಗ ಮಹಮ್ಮದ್ ಅಶ್ರಫ್ @ ಚೋಟ ಅಶ್ರಫ್(47) ಮತ್ತು ಫರಂಗಿಪೇಟೆ ಜುಮಾದಿ ಗುಡ್ಡೆ ನಿವಾಸಿ ಅಬುಬಕ್ಕರ್ ಸಿದ್ದಿಕ್ ಮಗ ಮಹಮ್ಮದ್ ಅಜಾರುದ್ದಿನ್(38) ಎಂಬವರನ್ನು ವಶಕ್ಕೆ ಪಡೆದು ಅವರ ಬಳಿಯಿದ್ದ ಸುಮಾರು 2 ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಎರಡು ಕಾರ್ಯಾಚರಣೆ ವೇಳೆ ಒಟ್ಟು ನಾಲ್ಕು ಮಂದಿ ಆರೋಪಿಗಳು ಸಮೇತ 9.850 ಗ್ರಾಂ ಗಾಂಜಾ ಮತ್ತು ಎರಡು ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್.ಕೆ, ಎಡಿಷನಲ್ ಎಸ್ಪಿ ಅನಿಲ್ ಕುಮಾರ್ ಬೂಮರೆಡ್ಡಿ, ಬಂಟ್ವಾಳ ಡಿವೈಎಸ್ಪಿ ವಿಜಯ ಪ್ರಸಾದ್, ಇನ್ಸ್‌ಪೆಕ್ಟರ್ ಅನಂತ ಪದ್ಮನಾಭ, ಸಬ್ ಇನ್ಸ್‌ಪೆಕ್ಟರ್ ಸಂದೀಪ್ ಕುಮಾರ್ ಶೆಟ್ಟಿ, ಸಬ್ ಇನ್ಸ್‌ಪೆಕ್ಟರ್ ದುರ್ಗಪ್ಪ, ಎಎಸ್ಐ ನಾರಾಯಣ, ಎಎಸ್ಐ ನವೀನ್ ಕುಮಾರ್ ಹಾಗೂ ಸಿಬ್ಬಂದಿ
ಸುರೇಶ್ ಕುಮಾರ್,ವಿಜಯ್ ,ಇರ್ಷಾದ್ ಪಿ, ಪ್ರವೀಣ್ ರೈ, ಪ್ರವೀಣ್ ಕುಮಾರ್, ರಾಜೇಶ್ ಎಸ್, ಬಸವರಾಜ್ ಎಚ್ ಕೆ,ವಿಜಯ್ ,ಸಂದೀಪ್, ನಾಗನಾಥ್,ರಂಜಾನ್,ಆದರ್ಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


