Saturday, June 6, 2026
HomeUncategorizedಚಾರ್ಮಾಡಿಯಲ್ಲಿ ಎರಡು ಸರಣಿ ಅಪಘಾತ; ಕುಡಿದ ಮತ್ತಿನಲ್ಲಿ ಗಾಡಿ ಓಡಿಸುತ್ತಿರುವ ಪ್ರವಾಸಿಗರು!!

ಚಾರ್ಮಾಡಿಯಲ್ಲಿ ಎರಡು ಸರಣಿ ಅಪಘಾತ; ಕುಡಿದ ಮತ್ತಿನಲ್ಲಿ ಗಾಡಿ ಓಡಿಸುತ್ತಿರುವ ಪ್ರವಾಸಿಗರು!!

- Advertisement -
- Advertisement -

ಚಿಕ್ಕಮಗಳೂರು: ಚಾರ್ಮಾಡಿ ಘಾಟ್ ಫಾಲ್ಸ್ ನೋಡಲು ಬಂದಿದ್ದ ಯುವಕರ ತಂಡವೊಂದು ಕುಡಿದ ಅಮಲಿನಲ್ಲಿ ಕಾರ್ ಚಲಾಯಿಸಿ ಗುಂಡಿಗೆ ಬಿದ್ದಿರುವ ಘಟನೆ ಭಾನುವಾರ ಸಂಜೆ ಕೊಟ್ಟಿಗೆಹಾರದ ಮಲಯ ಮಾರುತದ ಬಳಿ ನಡೆದಿದೆ.

ಸದ್ಯ ಕಾರಿನಲ್ಲಿದ್ದ ಐವರು ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದು ಯಾವುದೇ ಮಾನ ಹಾನಿ ಸಂಭವಿಸಿಲ್ಲ.

ಮತ್ತೊಂದೆಡೆ ಕುಡಿದ ಅಮಲಿನಲ್ಲಿ ಮತ್ತೋರ್ವ ಯುವಕ ವಾಹನ ಚಲಾಯಿಸಿದ್ದು ಒಂದರ ಹಿಂದೆ ಒಂದರಂತೆ ಒಟ್ಟು ನಾಲ್ಕು ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ಭಾನುವಾರ ಸಂಜೆ ಮೂಡಿಗೆರೆಯ ಕೃಷ್ಣಪುರದಲ್ಲಿ ನಡೆದಿದೆ.


ಸರಣಿ ಅಪಘಾತದಿಂದ ಗಂಟೆ ಗಟ್ಟಲೆ ಟ್ರಾಫಿಕ್ ಜಾಮ್ ಆಗಿದ್ದು, ಪ್ರಯಾಣಿಕರು ಪರದಾಡಬೇಕಾದ ಸ್ಥಿತಿ ಎದುರಾಯಿತು. ಪ್ರವಾಸ ಕೇಂದ್ರಗಳಿಗೆ ಯುವಕರು ಕುಡಿದು ಭೇಟಿ ಕೊಡುತ್ತಿರುವುದು ವಿಷಾದನೀಯ.

- Advertisement -

Latest News

error: Content is protected !!