Sunday, May 5, 2024
Homeಕರಾವಳಿಮಂಗಳೂರು: ಉಡುಗೊರೆ ಕೊಡಿಸುವುದಾಗಿ ಭರವಸೆ ನೀಡಿ ವ್ಯಕ್ತಿಯೊಬ್ಬನಿಂದ 2.92 ಲಕ್ಷ ರೂಪಾಯಿ ವಂಚನೆ

ಮಂಗಳೂರು: ಉಡುಗೊರೆ ಕೊಡಿಸುವುದಾಗಿ ಭರವಸೆ ನೀಡಿ ವ್ಯಕ್ತಿಯೊಬ್ಬನಿಂದ 2.92 ಲಕ್ಷ ರೂಪಾಯಿ ವಂಚನೆ

spot_img
- Advertisement -
- Advertisement -

ಮಂಗಳೂರು: ಉಡುಗೊರೆ ಕೊಡಿಸುವುದಾಗಿ ಭರವಸೆ ನೀಡಿ ವ್ಯಕ್ತಿಯೊಬ್ಬನಿಂದ 2.92 ಲಕ್ಷ ರೂಪಾಯಿ ವಂಚಿಸಿ ಪರಾರಿಯಾಗಿರುವ ಬಗ್ಗೆ ನಗರದ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆಪ್ಟೆಂಬರ್ 20, 2021 ರಂದು ವ್ಯಕ್ತಿಯೊಬ್ಬನನ್ನು ವಾಟ್ಸಾಪ್ ಮೂಲಕ ಸಂಪರ್ಕಿಸಿ ನಿಮಗೆ ಮನೆ ನಿರ್ಮಿಸಲು ಸಹಾಯ ಮಾಡಲು ಸಿದ್ಧ ಎಂದು ತಿಳಿಸಿದರು. ಅಲ್ಲದೆ ಅದಕ್ಕೆ ಪ್ರತಿಯಾಗಿ ಆ ವ್ಯಕ್ತಿ ಅವರಿಗೆ ಉಡುಗೊರೆ ಕಳುಹಿಸುವುದಾಗಿಯೂ ಭರವಸೆ ನೀಡಿದ್ದರು ಹೀಗಾಗಿ ದೂರುದಾರರಿಗೆ ಕೂಳೂರಿನಲ್ಲಿರುವ ಕೆನರಾ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ ವ್ಯಕ್ತಿಯೂ ಹಣ ಕಳುಹಿಸಿದ್ದರು.

ಇನ್ನು ದೂರುದಾರರಿಗೆ ಅಕ್ಟೋಬರ್ 5 ರಂದು ಆಂಗ್ಲ ಭಾಷೆಯಲ್ಲಿ ಮಾತನಾಡುತ್ತಾ ಮತ್ತೊಮ್ಮೆ ಹೊಸ ಸಂಖ್ಯೆಯಿಂದ ಕರೆ ಮಾಡಿದ ವ್ಯಕ್ತಿ, ಉಡುಗೊರೆಯು ದೆಹಲಿ ತಲುಪಿದ್ದು, ಮಂಗಳೂರು ತಲುಪಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು 35,000 ರೂ.ನೀಡಬೇಕು ಎಂದು ಹೇಳಿದ್ದು, ಅದರಂತೆ ದೂರುದಾರರು ಕರೆ ಮಾಡಿದವರಿಗೆ ಗೂಗಲ್ ಪೇ ಮೂಲಕ ಮೊತ್ತವನ್ನು ಪಾವತಿಸಿದ್ದಾರೆ.

ಅದೇ ವ್ಯಕ್ತಿ ಮತ್ತೆ ದೂರುದಾರರಿಗೆ ಕರೆ ಮಾಡಿ 97,000 ರೂ ಹಣವನ್ನು ಖಾತೆಗೆ ಹಾಕುವಂತೆ ತಿಳಿಸಿದ್ದಾರೆ. ಮತ್ತೆ ಅದೆ ವ್ಯಕ್ತಿ ಕರೆ ಮಾಡಿ ನೆಫ್ಟ್ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಗೆ 1.6 ಲಕ್ಷ ರೂಪಾಯಿಗಳನ್ನು ಕಳುಹಿಸಲಾಗಿದೆ. ಆದರೆ ಒಟ್ಟು 2.92 ರೂ.ಗಳನ್ನು ಹಣ ಪಡೆದಿರುವ ವ್ಯಕ್ತಿಯು ಯಾವುದೇ ಉಡುಗೊರೆಯನ್ನು ಕಳುಹಿಸದೆ ವಂಚಿಸಿದ್ದಾರೆ ಎಂದು ವ್ಯಕ್ತಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!