Wednesday, June 24, 2026
Homeಅಪರಾಧಜಿಲ್ಲೆಯಲ್ಲಿ ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

ಜಿಲ್ಲೆಯಲ್ಲಿ ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

- Advertisement -
- Advertisement -

ಮಂಗಳೂರು: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೈಬರ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ಎರಡು ಬೇರೆ ಬೇರೆ ರೀತಿಯ ಸೈಬರ್‌ ವಂಚನೆಗಳಿಗೆ ಸಂಬಂಧಿಸಿದಂತೆ ಮಂಗಳೂರು ಸೆನ್‌ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ಕೇರಳದ ಜಾಫ‌ರ್‌ ಕೆ. (49) ಮತ್ತು ಕೇರಳದ ಆಕಾಶ್‌ ಎ.(22)ನನ್ನು ಪೊಲೀಸರು ಬಂಧಿಸಿದ್ದಾರೆ.

ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವ ನೆಪದಲ್ಲಿ ವ್ಯಕ್ತಿಯೋರ್ವನನ್ನು ನಂಬಿಸಿ ಅವರಿಂದ ಹಂತ ಹಂತವಾಗಿ 10,84,017 ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿದಾಗ ಹಣ ಕೇರಳ ಪಾಲಕ್ಕಾಡ್‌ನ‌ ಜಾಫ‌ರ್‌ ಕೆ. ಹೆಸರಿನ ಬ್ಯಾಂಕ್‌ ಖಾತೆಗೆ ವರ್ಗಾವಣೆಯಾಗಿರುವುದು ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ.

ಟ್ರಾಯ್‌ ಪ್ರತಿನಿಧಿ ಎಂದು ಕರೆ ಮಾಡಿ ವ್ಯಕ್ತಿಯೋರ್ವನನ್ನು ನಂಬಿಸಿ, ನಿಮ್ಮ ಹೆಸರಿನಲ್ಲಿ ಇನ್ನೊಂದು ಮೊಬೈಲ್‌ ಸಂಖ್ಯೆ ನೋಂದಣಿ ಆಗಿದ್ದು ಮುಂಬಯಿಯ ಅಂಧೇರಿಯಲ್ಲಿ ಅದನ್ನು ಹಲವಾರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಬಳಸಲಾಗಿದೆ. ಹಾಗಾಗಿ ಕೂಡಲೇ ಪೊಲೀಸ್‌ ಠಾಣೆ ಸಂಪರ್ಕಿಸಬೇಕು ಎಂದು ತಿಳಿಸಿದ್ದ. ಹಾಗೆಯೇ ‘ಡಿಜಿಟಲ್‌ ಅರೆಸ್ಟ್‌’ ಮಾಡುವುದಾಗಿ ಹೆದರಿಸಿ, ಹಂತ ಹಂತವಾಗಿ 1.71 ಕೋ.ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿದ್ದ. ಈ ಪ್ರಕರಣದ ಆರೋಪಿ ಆಕಾಶ್ ಎ ಅನ್ನು ಪೊಲೀಸರು ಕೇರಳಕ್ಕೆ ತೆರಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌, ಡಿಸಿಪಿಗಳಾದ ಸಿದ್ಧಾರ್ಥ ಗೋಯಲ್‌ ಮತ್ತು ರವಿಶಂಕರ್‌ ಮಾರ್ಗದರ್ಶನದಲ್ಲಿ ಸೆನ್‌ ಠಾಣೆಯ ಎಸಿಪಿ ರವೀಶ್‌ ನಾಯಕ್‌ ಮತ್ತು ಸೆನ್‌ ಠಾಣಾ ನಿರೀಕ್ಷಕ ಸತೀಶ್‌ ಎಂ.ಪಿ. ನೇತೃತ್ವದಲ್ಲಿ ತಂಡ ಕಾರ್ಯನಿರ್ವಹಿಸಿತ್ತು.

- Advertisement -

Latest News

error: Content is protected !!