Thursday, May 9, 2024
Homeತಾಜಾ ಸುದ್ದಿಮಂಗಳೂರು; ಪಂಚಾಯತ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಎಸ್ ಡಿಪಿಐ ನ್ನು ಬೆಂಬಲಿಸಿದಕ್ಕೆ  ಇಬ್ಬರು ಬಿಜೆಪಿ ಸದಸ್ಯರು...

ಮಂಗಳೂರು; ಪಂಚಾಯತ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಎಸ್ ಡಿಪಿಐ ನ್ನು ಬೆಂಬಲಿಸಿದಕ್ಕೆ  ಇಬ್ಬರು ಬಿಜೆಪಿ ಸದಸ್ಯರು ಉಚ್ಛಾಟನೆ

spot_img
- Advertisement -
- Advertisement -

ಮಂಗಳೂರು; ಉಳ್ಳಾಲದ ತಲಪಾಡಿ ಗ್ರಾಮ ಪಂಚಾಯತ್ ನ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯಲ್ಲಿ SDPIನ್ನು ಬೆಂಬಲಿಸಿ ಗೆಲುವಿಗೆ ಕಾರಣರಾದ ಇಬ್ಬರು ಬಿಜೆಪಿ ಬೆಂಬಲಿತ ಸದಸ್ಯರನ್ನು ಜಿಲ್ಲಾಧ್ಯಕ್ಷರ ಸೂಚನೆ ಮೇರೆಗೆ ಆರು ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆ . ಈ ಬಗ್ಗೆ ಬಿಜೆಪಿ ಮಂಡಲ ಅಧ್ಯಕ್ಷ ಚಂದ್ರಹಾಸ ಪಂಡಿತ್ ಹೌಸ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ತಲಪಾಡಿ ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿಗೆ ಬಹುಮತ ಇದ್ದ ಕಾರಣ ಸತ್ಯರಾಜ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನಿಲ್ಲಿಸಲಾಗಿತ್ತು. ಆದರೆ ಬಿಜೆಪಿ ಬೆಂಬಲಿತ ಸದಸ್ಯರಾದ ಮುಹಮ್ಮದ್ ಫಯಾಝ್ ಮತ್ತು ಮುಹಮ್ಮದ್ ಅವರು ಎಸ್ ಡಿಪಿಐ ನಾಯಕರ ಆಮಿಷಕ್ಕೆ ಒಳಗಾಗಿ ಅಡ್ಡ ಮತದಾನ ಮಾಡುವ ಮೂಲಕ ಎಸ್ ಡಿಪಿಐ ಗೆಲುವಿಗೆ ಕಾರಣರಾಗಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಆದರೂ ಅವರು ಪಕ್ಷಕ್ಕೆ ದ್ರೋಹ ಬಗೆದ ಕಾರಣ ಕ್ರಮ‌ ಕೈಗೊಳ್ಳಲಾಗಿದೆ ಎಂದು ಚಂದ್ರಹಾಸ್ ಹೇಳಿದ್ದಾರೆ.

ಬಿಜೆಪಿ ಎಸ್ ಡಿಪಿಐಗೆ ಬೆಂಬಲ, ಸಹಕಾರ ನೀಡಿಲ್ಲ. ಬೆಂಬಲ ನೀಡುವ ಅಗತ್ಯವೂ ಇಲ್ಲ. ಈ ಬಗ್ಗೆ ತಪ್ಪು ಸಂದೇಶ ಹರಿದಾಡುತ್ತಿದ್ದು, ಕಾರ್ಯಕರ್ತರು ಗೊಂದಲಕ್ಕೀಡಾಗಬಾರದು ಎಂದು ಅವರು ತಿಳಿಸಿದ್ದಾರೆ.

ಗ್ರಾಮ ಪಂಚಾಯತ್ ನಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಬಿ ಮೀಸಲಾತಿ ಬಂದಿದ್ದು ಬಿಜೆಪಿಯಲ್ಲಿ ಪುಷ್ಪಲತಾ ಶೆಟ್ಟಿ ಮಾತ್ರ ಇದ್ದ ಕಾರಣ ಅವಿರೋಧವಾಗಿ ಉಪಾಧ್ಯಕ್ಷರಾಗಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ, ಕಾರ್ಯದರ್ಶಿಗಳಾದ ಸತೀಶ್ ಕುಂಪಲ, ಜಯಶ್ರೀ ಕರ್ಕೇರ, ಮುಖಂಡರಾದ ಕಸ್ತೂರಿ ಪಂಜ, ರಣದೀಪ್ ಕಾಂಚನ್, ನವೀನ್ ಪಾದಲ್ಪಾಡಿ, ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು, ಪುಷ್ಪಲತಾ ಶೆಟ್ಟಿ, ಹೇಮಂತ್ ಶೆಟ್ಟಿ ದೇರಳಕಟ್ಟೆ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!