Sunday, June 7, 2026
Homeಕರಾವಳಿವಿಟ್ಲ; ಪುಣಚದಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಸಿಕ್ಕ ಪ್ರಕರಣಕ್ಕೆ ಟ್ವಿಸ್ಟ್; ಮೃತ ವ್ಯಕ್ತಿಯ ಗುರುತು...

ವಿಟ್ಲ; ಪುಣಚದಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಸಿಕ್ಕ ಪ್ರಕರಣಕ್ಕೆ ಟ್ವಿಸ್ಟ್; ಮೃತ ವ್ಯಕ್ತಿಯ ಗುರುತು ಪತ್ತೆ ಹಚ್ಚಿದ ಕುಟುಂಬಸ್ಥರು

- Advertisement -
- Advertisement -

ವಿಟ್ಲ; ಪುಣಚ ಗ್ರಾಮದ ನೆಲ್ಲಿಗುಡ್ಡೆಯ ಜರಿ‌ಮೂಳೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾದ ಇದೀಗ ಕೇಸ್ ಗೆ ಟ್ವಿಸ್ಟ್ ಸಿಕ್ಕಿದೆ.ಪುಣಚ ಗ್ರಾಮದ ಮೊಟ್ಟೆತ್ತಡ್ಕ-ಕೆದುಮೂಲೆ ನಿವಾಸಿ ಯುವಕ, ವೀರಪ್ಪ ನಾಯ್ಕ ಅವರ ಪುತ್ರ ಕಮಲಾಕ್ಷ (32) ಅವರ ಮೃತದೇಹ ಎಂದು ಗೊತ್ತಾಗಿದೆ.

ಮೈಸೂರಿಗೆ ಕೆಲಸಕ್ಕೆಂದು ಮನೆಯಲ್ಲಿ ಹೇಳಿ ಕಳೆದ ಅ.25 ರಂದು ಕಮಲಾಕ್ಷ ಮನೆಯಿಂದ ತೆರಳಿದ್ದ.ಆ ಬಳಿಕ ಕಮಾಲಾಕ್ಷ ಸಂಪರ್ಕಕ್ಕೆ ಸಿಕ್ಕಿರಲಿಲ್ಲ.ಈ ಬಗ್ಗೆ ಕಮಾಲಾಕ್ಷ ಅವರ ತಾಯಿ ಯಾವುದೇ ದೂರು ನೀಡದೆ ಸುಮ್ಮನಿದ್ದರು, ಮಗ ಮನೆಗೆ ಬರಬಹುದು ಎಂದು ನಿರೀಕ್ಷೆಯಲ್ಲಿದ್ದರು.

ಮೃತದೇಹ ಸಿಕ್ಕ‌ ಹಿನ್ನೆಲೆ ಮೃತದೇಹದ ಬಳಿ ತೆರಳಿ ಅವರ ತಾಯಿ ಮತ್ತು ಸಹೋದರಿ ಪರಿಶೀಲಿಸಿದ್ದು, ಕಮಲಾಕ್ಷ ಧರಿಸಿದ ಬಟ್ಟೆ, ಚಪ್ಪಲಿ, ಫೋನ್‌ ಅನ್ನು ಗುರುತಿಸಿದ್ದಾರೆ. ಇದರ ಆಧಾರದಲ್ಲಿ ಕಮಲಾಕ್ಷನ ಮೃತದೇಹ ಎಂದು ಗುರುತಿಸಿದ್ದಾರೆ. ಈ ಕುರಿತು ವಿಟ್ಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!