Saturday, June 6, 2026
Homeಕರಾವಳಿಉಡುಪಿಉಡುಪಿ: ನೀವೊಮ್ಮೆ ಅಂಡಮಾನ್ ನಿಕೋಬಾರ್ ಜೈಲಿಗೆ ಹೋಗಿ ಬನ್ನಿ: ಬಿ.ಕೆ.ಹರಿಪ್ರಸಾದ್‌ಗೆ ಶಾಸಕ ರಘುಪತಿ ಭಟ್‌ ಸಲಹೆ

ಉಡುಪಿ: ನೀವೊಮ್ಮೆ ಅಂಡಮಾನ್ ನಿಕೋಬಾರ್ ಜೈಲಿಗೆ ಹೋಗಿ ಬನ್ನಿ: ಬಿ.ಕೆ.ಹರಿಪ್ರಸಾದ್‌ಗೆ ಶಾಸಕ ರಘುಪತಿ ಭಟ್‌ ಸಲಹೆ

- Advertisement -
- Advertisement -

ಉಡುಪಿ: ಸಾವರ್ಕರ್ ಬ್ರಿಟೀಷರ ತಟ್ಟೆ ಕಾಸಿಂದ ಜೀವನ ಮಾಡುತ್ತಿದ್ದರು ಎಂದು ಬಿ.ಕೆ.ಹರಿಪ್ರಸಾದ್ ನೀಡಿದ್ದ ಹೇಳಿಕೆ ವಿರುದ್ಧ ಶಾಸಕ ರಘುಪತಿ ಭಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ರಘುಪತಿ ಭಟ್‌, ಹರಿಪ್ರಸಾದ್ ಇತಿಹಾಸವನ್ನು ಒಮ್ಮೆ ಓದಬೇಕು‌. ಅಧಿವೇಶನ ಮುಗಿಸಿ ಅಂಡಮಾನ್ ನಿಕೋಬಾರ್ ಜೈಲಿಗೆ ಒಮ್ಮೆ ಹೋಗಿ ಬನ್ನಿ. ಅಂಡಮಾನ್ ಜೈಲಿನ ಪರಿಸ್ಥಿತಿಯನ್ನು ನೋಡಿ ಬನ್ನಿ. ಕಾಲಾಪಾನಿ ಶಿಕ್ಷೆ ಹೇಗಿತ್ತು ಎಂಬುದನ್ನು ಅಲ್ಲಿ ಸೌಂಡ್ ಅಂಡ್ ಲೈಟ್ ಮೂಲಕ ತೋರಿಸಲಾಗುತ್ತದೆ ಎಂದು ತಿರುಗೇಟು ನೀಡಿದ್ದಾರೆ.

- Advertisement -

Latest News

error: Content is protected !!