Wednesday, April 16, 2025
Homeಕರಾವಳಿಉಡುಪಿಮಂಗಳೂರು;ಮುಲ್ಕಿಯಲ್ಲಿ ಬಾಲಕನ ಅಪಹರಣ ಪ್ರಹಸನಕ್ಕೆ ಟ್ವಿಸ್ಟ್; ಅಪಹರಣದ ನಾಟಕಕ್ಕೆ ಅಪ್ಪನೇ ಡೈರೆಕ್ಟರ್

ಮಂಗಳೂರು;ಮುಲ್ಕಿಯಲ್ಲಿ ಬಾಲಕನ ಅಪಹರಣ ಪ್ರಹಸನಕ್ಕೆ ಟ್ವಿಸ್ಟ್; ಅಪಹರಣದ ನಾಟಕಕ್ಕೆ ಅಪ್ಪನೇ ಡೈರೆಕ್ಟರ್

spot_img
- Advertisement -
- Advertisement -

ಮಂಗಳೂರು; ಮುಲ್ಕಿಯ ಹೆಜಮಾಡಿಯಲ್ಲಿ ಸದ್ದು ಮಾಡಿದ್ದ ಶಾಲಾ ಬಾಲಕನ ಅಪಹರಣ ಪ್ರಹಸನಕ್ಕೆ ಟ್ವಿಸ್ಟ್ ಸಿಕ್ಕಿದೆ. ಮಗನನ್ನು ತಂದೆಯೇ ಕಿಡ್ನ್ಯಾಪ್ ಮಾಡಿರೋದು ತನಿಖೆಯಿಂದ ಬಯಲಾಗಿದೆ.

ಇಲ್ಲಿನ ಕಾರ್ನಾಡ್ ಶಾಲೆಗೆ ಬಸ್ಸಿನಲ್ಲಿ ಬರುತ್ತಿದ್ದ 4 ನೇ ಬಾಲಕ ನಾಪತ್ತೆಯಾಗಿದ್ದ. ಬಾಲಕನ ತಂದೆ ಹರೀಶ್ ಶಾಲೆಗೆ ಬಂದು ಮಗ ಕಾಣುತ್ತಿಲ್ಲ ಎಂದು ಗಲಾಟೆ ಮಾಡಿದ್ದರು. ಅಲ್ಲದೇ ಠಾಣೆಯಲ್ಲಿ ದೂರು ನೀಡಿದ್ದರು.

ಇತ್ತ ಪೊಲೀಸರು ತನಿಖೆ ನಡೆಸಿದಾಗ ನಿಜಾಂಶ ಬಯಲಾಗಿದೆ.  ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಬಾಲಕ ಶಾಲೆ ಎದುರು ಭಾಗದಲ್ಲಿ ಬಸ್ಸಿನಲ್ಲಿ ಬಂದು ಇಳಿದಿದ್ದು ತತ್‌ಕ್ಷಣ ಅಲ್ಲಿಗೆ ಆಟೋದಲ್ಲಿ ಆಗಮಿಸಿದ ಮಗುವಿನ ತಂದೆ ಹರೀಶ್ ಮಗುವನ್ನು ಆಟೋದಲ್ಲಿ ಕುಳ್ಳಿರಿಸಿ ಸ್ಥಳದಿಂದ ಪರಾರಿಯಾಗಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಆರೋಪಿ ಹರೀಶ್ ಗೆ ಯಾಕೆ ಈ ರೀತಿ ಅಪಹರಣ ಮಾಡಿದ್ದಾರೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!