Thursday, June 4, 2026
Homeಕರಾವಳಿಬೆಳ್ತಂಗಡಿ : ಧರ್ಮಸ್ಥಳದ ಯುವತಿ ಪಂಜಾಬ್ ನಲ್ಲಿ ನಿಗೂಢ ಸಾವು ಪ್ರಕರಣ: ಕೊನೆಗೂ ಬಯಲಾಯಿತು ಆಕಾಂಕ್ಷ...

ಬೆಳ್ತಂಗಡಿ : ಧರ್ಮಸ್ಥಳದ ಯುವತಿ ಪಂಜಾಬ್ ನಲ್ಲಿ ನಿಗೂಢ ಸಾವು ಪ್ರಕರಣ: ಕೊನೆಗೂ ಬಯಲಾಯಿತು ಆಕಾಂಕ್ಷ ಸಾವಿನ ರಹಸ್ಯ

- Advertisement -
- Advertisement -

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಬೊಳಿಯರ್ ನಿವಾಸಿ ಸುರೇಂದ್ರ ನಾಯರ್ ಮತ್ತು ಸಿಂಧೂ ದೇವಿ ದಂಪತಿಗಳ ಎರಡನೇ ಪುತ್ರಿ ಏರೋಸ್ಪೇಸ್ ಇಂಜಿನಿಯರ್ ಆಗಿ ಡೆಲ್ಲಿಯಲ್ಲಿ ಉದ್ಯೋಗಿಯಾಗಿದ್ದ ಆಕಾಂಕ್ಷ ಎಸ್ ನಾಯರ್(22) ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪ್ರೇಮ ವೈಫಲ್ಯದಿಂದ ಕಾರಣದಿಂದ ಅತ್ಮಹತ್ಯೆಗೆ ಶರಣಾಗಿದ್ದು ಬಯಲಾಗಿದೆ‌.

ಘಟನೆಯ ವಿವರ: ಪಂಜಾಬ್ ಜಿಲ್ಲೆಯ ಪಗ್ವಾಡದಲ್ಲಿರುವ ಎಲ್.ಪಿ.ಯು(Lovely Professional University) ಮೆಂಟರ್ ಪ್ರೊಫೆಸರ್ ಎರಡು ಮಕ್ಕಳ ತಂದೆ ಕೇರಳದ ಕೊಟ್ಟಾಯಂ ನಿವಾಸಿ ಬಿಜಿಲ್ ಮ್ಯಾಥ್ಯೂ(45) ಮತ್ತು ಆಕಾಂಕ್ಷ ಪರಸ್ಪರ ಪ್ರೀತಿಸುತ್ತಿದ್ದರು. ಈ ನಡುವೆ ಆಕಾಂಕ್ಷಳ ಕೆಲವೊಂದು ನಡವಳಿಕೆಯಿಂದ ಬಿಜಿಲ್ ಮ್ಯಾಥ್ಯೂ ಬ್ರೇಕಪ್ ಮಾಡಿಕೊಂಡಿದ್ದ. ಇದೆ ವಿಚಾರದಲ್ಲಿ ಡೆಲ್ಲಿಯಿಂದ ಪಂಜಾಬ್ ನ ಪಾಗ್ವಡಕ್ಕೆ ಮೇ.16 ರಂದು ಬಂದು ಮ್ಯಾಥ್ಯೂ ಮನೆಗೆ ಹೋಗಿ ನಿನ್ನ ಹೆಂಡತಿ ಮಕ್ಕಳಿಬ್ಬರನ್ನು ಬಿಟ್ಟು ನನ್ನ ಜೊತೆ ಬಂದು ಮದುವೆಯಾಗಬೇಕೆಂದು ಡಿಮ್ಯಾಂಡ್ ಇಟ್ಟಿದ್ದಳು. ಇದಕ್ಕೆ ಮ್ಯಾಥ್ಯೂ ಕ್ಯಾರೆ ಮಾಡದೆ ಪ್ರೀತಿಯನ್ನು ಕೈ ಚೆಲ್ಲಿದ್ದಾನೆ. ಇದರಿಂದ ನೊಂದ ಆಕಾಂಕ್ಷ ಮೇ.17 ರಂದು ಬೆಳಗ್ಗೆ 11 ಗಂಟೆಗೆ ಕೇರಳ ಮೂಲದ ಸ್ನೇಹಿತನ ಜೊತೆ ಬೈಕ್ ಮೂಲಕ ಆಕಾಂಕ್ಷ ಕಾಲೇಜಿಗೆ ಹೋಗಿ ಮ್ಯಾಥ್ಯೂಗೆ ನಾನು ಸಾಯುತ್ತೇನೆ ಎಂದು ಮೆಸೇಜ್ ಹಾಕಿ ಕಟ್ಟಡದ ನಾಲ್ಕನೇ ಮಹಡಿಗೆ ಹೋಗಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಳಿಕ ಆಸ್ಪತ್ರೆಗೆ ಮೃತದೇಹವನ್ನು ಸಾಗಿಸಿದ್ದಾರೆ‌ ಎಂದು ಪಂಜಾಬ್ ಪೊಲೀಸರ ತನಿಖೆಯಲ್ಲಿ ಸತ್ಯ ಬಯಲಾಗಿದೆ‌.

ಪ್ರೊಫೆಸರ್‌ ವಿರುದ್ಧ ಪ್ರಕರಣ ದಾಖಲು: ಜಲಂದರ್ ಪೊಲೀಸ್ ಠಾಣೆಯಲ್ಲಿ ಮೃತಪಟ್ಟ ಆಕಾಂಕ್ಷ ಸಹೋದರ ಆಕಾಶ್ ನಾಯರ್ ಮೇ.18 ರಂದು ಸಂಜೆ ಎಲ್.ಪಿ.ಯು ಕಾಲೇಜಿನ ಪ್ರೊಫೆಸರ್ ಕೇರಳದ ಕೊಟ್ಟಾಯಂ ನಿವಾಸಿಯಾಗಿರುವ ಬಿಜಿಲ್‌ ಮ್ಯಾಥ್ಯೂ(45) ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವುದಾಗಿ ದೂರು ನೀಡಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪ್ರೊಫೆಸರ್ ವಿರುದ್ಧ ತನಿಖೆ ನಡೆಸಲಿದ್ದಾರೆ.

ಸೋಮವಾರ ಶವಪರೀಕ್ಷೆ: ಮೃತಪಟ್ಟ ಆಕಾಂಕ್ಷ ಮೃತದೇಹ ಪಂಜಾಬ್ ರಾಜ್ಯದ ಜಲಂದರ್ ಜಿಲ್ಲೆಯ ಪಗ್ವಾಡ ತಾಲೂಕಿನ ಸಿವಿಲ್ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದ್ದು. ಕುಟುಂಬಸ್ಥರು ಮೇ.18 ರಂದು ಸಂಜೆ ಆಸ್ಪತ್ರೆಗೆ ಹೋಗಿ ಮೃತದೇಹ ನೋಡಿದ ಬಳಿಕ ಸಹೋದರ ದೂರು ನೀಡಿದ್ದು ತಡವಾದ ಕಾರಣ ಮೇ.19 ರಂದು ಸೋಮವಾರ ಶವಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಧರ್ಮಸ್ಥಳದ ಬೊಳಿಯರ್ ಮನೆಗೆ ಕುಟುಂಬದವರು ತೆಗೆದುಕೊಂಡು ಬಂದು ಅಂತ್ಯಸಂಸ್ಕಾರ ಮಾಡಲಿದ್ದಾರೆ.

ಮೊಬೈಲ್ ನಲ್ಲಿ ಡೆತ್ ನೋಟ್ ಪತ್ತೆ: ಆಕಾಂಕ್ಷ ಸಾವಿಗೂ ಮುನ್ನ ತನ್ನ ಮೊಬೈಲ್ ನಲ್ಲಿ ಮೇ.17 ರಂದು ವಾಟ್ಸಪ್ ನಲ್ಲಿ ಪ್ರೊಫೆಸರ್ ಬಿಜಿಲ್ ಮ್ಯಾಥ್ಯೂ ಮೊಬೈಲ್ ಗೆ ಕಳುಹಿಸಿದ ಡೆತ್ ನೋಟ್ ಪತ್ತೆಯಾಗಿದ್ದು ಮೊಬೈಲ್ ತನಿಖೆಗಾಗಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸರ್ಟಿಫಿಕೇಟ್ ತರಲು ಅಂತ ಹೇಳಿದ್ದಳು: ಆಕಾಂಕ್ಷ ಮನೆಯವರಿಗೆ ಕರೆ ಮಾಡಿ ನಾನು ಡೆಲ್ಲಿಯಿಂದ ಎಲ್.ಪಿ.ಯು ಕಾಲೇಜಿಗೆ ಸರ್ಟಿಫಿಕೇಟ್ ತರಲು ಹೋಗುತ್ತಿರುವುದಾಗಿ ಹೇಳಿ ತಾಯಿಯಿಂದ 2 ಸಾವಿರ ಹಣ ಬೇಕೆಂದು ಗೂಗಲ್ ಪೇ ಮಾಡಿಸಿದ್ದಳು. ಬಳಿಕ ಕರೆ ಸ್ವೀಕರಿಸದೆ ಮೆಸೇಜ್ ಮಾಡಿ ಕಾಲೇಜಿನಲ್ಲಿರುವುದಾಗಿ ಹೇಳಿ ಕೊನೆಗೆ ಆತ್ಮಹತ್ಯೆ ಸುದ್ದಿ ಮನೆಯವರಿಗೆ ಪೊಲೀಸರಿಂದ ತಲುಪಿದೆ.

- Advertisement -

Latest News

error: Content is protected !!