Thursday, June 4, 2026
Homeಕರಾವಳಿಬೆಳ್ತಂಗಡಿ : ಚಾರ್ಮಾಡಿ ಹಗಲಲ್ಲೇ ತೋಟಕ್ಕೆ ದಾಳಿ ಇಟ್ಟ ಒಂಟಿ ಸಲಗ

ಬೆಳ್ತಂಗಡಿ : ಚಾರ್ಮಾಡಿ ಹಗಲಲ್ಲೇ ತೋಟಕ್ಕೆ ದಾಳಿ ಇಟ್ಟ ಒಂಟಿ ಸಲಗ

- Advertisement -
- Advertisement -

ಬೆಳ್ತಂಗಡಿ : ಚಾರ್ಮಾಡಿಯಲ್ಲಿ ಕಳೆದ ಎರಡು ದಿನಗಳಿಂದ ಕಾಡಾನೆ ಹಗಲಲ್ಲಿ ಕೃಷಿ ತೋಟಗಳಿಗೆ ಯಾವುದೇ ಎಗ್ಗಿಲ್ಲದೆ ದಾಳಿ ಇಟ್ಟು ಕೃಷಿ ಹಾನಿ ಉಂಟು ಮಾಡುತ್ತಿದೆ. 

ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಅನಾರು ಎಂಬಲ್ಲಿ ವಿಶ್ವನಾಥ,ರಘುನಾಥ ವಸಂತ, ಕೋಡಿಹಿತ್ತಿಲು ಬಾಬು ಗೌಡ ಮೊದಲಾದವರ ತೋಟಕ್ಕೆ ದಾಳಿ ಮಾಡಿದ ಕಾಡಾನೆ 150ಕ್ಕಿಂತ ಅಧಿಕ ಅಡಿಕೆ ಮರ ಮತ್ತು ತೆಂಗಿನ ಮರ, ಬಾಳೆ ಗಿಡಗಳಿಗೆ ಹಾನಿ ಉಂಟುಮಾಡಿದೆ.

ಸ್ಥಳೀಯರು ಕಾಡಾನೆಯನ್ನು ಓಡಿಸಿದ್ದು ಅದು ಸಮೀಪದ ಅರಣ್ಯದಲ್ಲಿ ಬೀಡು ಬಿಟ್ಟಿದ್ದು ಮತ್ತೆ ತೋಟಗಳಿಗೆ ದಾಳಿ ಇಡುವ ಸಾಧ್ಯತೆ ಇದೆ. ಅಲ್ಲದೆ ಇಲ್ಲಿ ಇನ್ನೆರಡು ಕಾಡಾನೆಗಳ ಹಿಂಡು ಕೂಡ ಇದೆ ಎಂದು ಸ್ಥಳೀಯರು ಹೇಳುತ್ತಾರೆ. ಒಟ್ಟಿನಲ್ಲಿ ಸ್ಥಳೀಯ ಜನರು ಭೀತರಾಗಿದ್ದಾರೆ. ಕಾಡಾನೆ ಹಾವಳಿ ತಡೆಗಟ್ಟಲು ಇಲಾಖೆ ಸರಿಯಾದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!