Thursday, June 25, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಉಜಿರೆ ರಸ್ತೆ ಪಕ್ಕದ ಫೋನ್ ಕೇಬಲ್ ಕಳ್ಳತನ

ಬೆಳ್ತಂಗಡಿ : ಉಜಿರೆ ರಸ್ತೆ ಪಕ್ಕದ ಫೋನ್ ಕೇಬಲ್ ಕಳ್ಳತನ

- Advertisement -
- Advertisement -

ಬೆಳ್ತಂಗಡಿ :ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಉಜಿರೆಯಲ್ಲಿ ಫೋನ್ ಕೇಬಲ್ ಕಳ್ಳತನ ನಡೆಸಿದ ಘಟನೆ ಭಾನುವಾರ ತಡರಾತ್ರಿ ನಡೆದಿದೆ.

ರಾತ್ರಿ ಒಂದು ಗಂಟೆ ಬಳಿಕ ರಸ್ತೆ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಹುದುಗಿಡಲಾಗಿದ್ದ ಕೇಬಲ್ ನ್ನು ಕೊಂಡೊಯ್ಯಲಾಗಿದೆ ಬೇರೆ ಬೇರೆ ಕಡೆಗಳಿಂದ ಕದ್ದು ತಂದ ಕೇಬಲನ್ನು ಉಜಿರೆಯ ರಸ್ತೆ ಬದಿಯ ನಾಗಬನದ ಮುಂಭಾಗ ಚರಂಡಿಯಲ್ಲಿ ದಾಸ್ತಾನು ಮಾಡಿದ್ದು ಮೇಲೆ ಮಣ್ಣು ಮುಚ್ಚಿ ಹಾಕಲಾಗಿತ್ತು.ಅಲ್ಲಿಂದ ಭಾನುವಾರ ರಾತ್ರಿ  ಮಣ್ಣಿನ ಅಡಿದ್ದ ಇದ್ದ ಸುಮಾರು ಒಂದು ಕ್ವಿಂಟeಲ್ ನಷ್ಟು ಕೇಬಲ್ ಅನ್ನು ಜೆಸಿಬಿ ಮೂಲಕ ಅಗೆದು ತೆಗೆದುಕೊಂಡು ಹೋದ ದೃಶ್ಯ ಸಮೀಪದ ಅಂಗಡಿಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಪ್ರಸ್ತುತ ರಸ್ತೆ ಕಾಮಗಾರಿ ಕೆಲವೊಮ್ಮೆ ತಡೆ ರಾತ್ರಿ ನಡೆಯುತ್ತಿರುವುದರಿಂದ ಹಾಗೂ ಭಾನುವಾರ ತಡರಾತ್ರಿ ವಿಪರೀತ ಮಳೆ ಇದ್ದ ಕಾರಣ ಸ್ಥಳೀಯ ಅಂಗಡಿಯಲ್ಲಿ ಮಲಗಿದ್ದ ಮಂದಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಜೆಸಿಬಿಯಲ್ಲಿ ಅಗೆಯುವ ವೇಳೆ ಉಜಿರೆ-ಮುಂಡಾಜೆ ಸಂಪರ್ಕದ ಬ್ರಾಡ್ ಬ್ಯಾಂಡ್ ಕೇಬಲ್ ತುಂಡಾಗಿ ಅಂತರ್ಜಾಲ ಸಂಪರ್ಕ ಕಡಿತಗೊಂಡಿದ್ದು ಸೋಮವಾರ ಬೆಳಿಗ್ಗೆ ಬಿಎಸ್ಸೆನ್ನೆಲ್ ಸಿಬ್ಬಂದಿ ಸಮಸ್ಯೆ ಹುಡುಕುವ ವೇಳೆ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಬೆಳ್ತಂಗಡಿ ಬಿಎಸ್ ಬಿಎಸ್ಸೆನ್ನೆಲ್ ನ ಜೆಟಿಒ ಆಶಾ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ

- Advertisement -

Latest News

error: Content is protected !!