ಬಂಟ್ವಾಳ: ತುಂಬೆ ಗ್ರಾಮದಲ್ಲಿ ತಾಲೂಕು ಪಂಚಾಯತಿ ಸದಸ್ಯ ಗಣೇಶ್ ಸುವರ್ಣ ಹಾಗೂ ಮಾಜಿ ತಾಲೂಕು ಪಂಚಾಯತಿ ಸದಸ್ಯ ಸೋಮಪ್ಪ ಕೋಟ್ಯಾನ್ ಇವರ ನೇತ್ರತ್ವದಲ್ಲಿ 461 ಮನೆಗಳಿಗೆ ಭಾರತೀಯ ಜನತಾ ಪಕ್ಷ, ಬಿರುವೆರ್ ಕುಡ್ಲ ಬಂಟ್ವಾಳ ಸಮಿತಿ ಹಾಗೂ ಗ್ರಾಮದ ವಿವಿಧ ಸಂಘಸಂಸ್ಥೆಗಳ ಹಾಗೂ ದಾನಿಗಳ ಸಹಕಾರದಿಂದ ಅಕ್ಕಿ ಹಾಗೂ ಅಗತ್ಯ ರೇಷನ್ ಕಿಟ್ ಗಳನ್ನು ವಿತರಿಸಲಾಯಿತು.
ಸಂಸದ ನಳಿನ್ ಕುಮಾರ್ ಕಟೀಲು, ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಹಾಸ ಪಂಡಿತ್ ಹೌಸ್, ಬಂಟ್ವಾಳ ಶಾಸಕ ರಾಜೇಶ್ ನ್ಯಾಕ್, ಜಿಲ್ಲಾ ಪಂಚಾಯತಿ ಸದಸ್ಯ ರವೀಂದ್ರ ಕಂಬಳಿ, ತಾ.ಪಂ ಸದಸ್ಯ ಗಣೇಶ್ ಸುವರ್ಣ, ಪಂಚಾಯತ್ ಅಧ್ಯಕ್ಷೆ ಹೇಮಲತಾ ಜಿ ಪೂಜಾರಿ, ಪಂಚಾಯಿತಿ ಸದಸ್ಯರು, ಬಿರುವೆರ್ ಕುಡ್ಲ ಬಂಟ್ವಾಳ ತಾಲೂಕು ಸಮಿತಿ ಗೌರವಾಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಅಧ್ಯಕ್ಷ ಕಿರಣ್ ಪೂಂಜೆರಕೋಡಿ, ಭಾಗ್ಯೋದಯ ಮಿತ್ರ ಕಲಾವೃಂದದ ಅಧ್ಯಕ್ಷ ಮೋಹನ್‌ದಾಸ್, ಮಾತೃ ವೃಂದದ ಅಧ್ಯಕ್ಷೆ ಜಯಂತಿ ರಂಗಪ್ಪ ಪೂಜಾರಿ, ಎಳೆಯರ ಬಳಗ ರಾಮಲ್ ಕಟ್ಟೆ ಅಧ್ಯಕ್ಷ ಸಂಜೀವ ಪೂಜಾರಿ ರಾಮಲ್ ಕಟ್ಟೆ, ಮಾತೃಮಂಡಳಿ ಅಧ್ಯಕ್ಷೆ ಸುನಂದ ಪದ್ಮನಾಭ, ಆಶೀರ್ವಾದ್ ಸೇವಾ ಸಂಘದ ಅಧ್ಯಕ್ಷ ಸುಶಾನ್ ಆಚಾರ್ಯ, ಮಹಿಳಾ ಮಂಡಳಿ ಅಧ್ಯಕ್ಷೆ ಪಾರ್ವತಿ ಐತಪ್ಪ ಕುಲಾಲ್, ಚೌಟ ಗ್ಯಾಸ್ ಏಜೆನ್ಸಿ ಸಹಕಾರ ನೀಡಿದ್ದಾರೆ.