Thursday, April 25, 2024
Homeಕರಾವಳಿಮಂಗಳೂರಿಗೆ 50 ದಿನಗಳಿಗೆ ಬೇಕಾಗುವಷ್ಟು ತುಂಬೆ ಡ್ಯಾಂನಲ್ಲಿ ನೀರು ಸಂಗ್ರಹ

ಮಂಗಳೂರಿಗೆ 50 ದಿನಗಳಿಗೆ ಬೇಕಾಗುವಷ್ಟು ತುಂಬೆ ಡ್ಯಾಂನಲ್ಲಿ ನೀರು ಸಂಗ್ರಹ

spot_img
- Advertisement -
- Advertisement -

ಬಂಟ್ವಾಳ: ತುಂಬೆ ವೆಂಟೆಡ್ ಡ್ಯಾಂನಲ್ಲಿ ಮುಂದಿನ ೫೦ ದಿನಗಳಿಗೆ ಬೇಕಾಗುವಷ್ಟು ನೀರಿನ ಲಭ್ಯತೆ ಇದ್ದು ಈ ವರ್ಷ ನೀರಿನ ಕೊರತೆ ಬರುವುದಿಲ್ಲ ಮತ್ತು ರೇಷನಿಂಗ್ ಮಾಡುವುದಿಲ್ಲ ಎಂದು ಮನಪಾ ಮೇಯರ್ ದಿವಾಕರ್ ಪಾಂಡೇಶ್ವರ್ ತಿಳಿಸಿದ್ದಾರೆ.
ಅವರು ಗುರುವಾರ ತುಂಬೆ ವೆಂಟೆಡ್ ಡ್ಯಾಂಗೆ ಭೇಟಿ ನೀಡಿ ನೀರಿನ ಮಟ್ಟವನ್ನು ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವರ್ಷ ಮಂಗಳೂರಿನ ಜನತೆಗೆ ನೀರಿನ ಅಭಾವ ಬರುವುದಿಲ್ಲ. ಕಳೆದ ವರ್ಷ ಈ ಸಮಯಕ್ಕೆ ರೇಷನಿಂಗ್ ವ್ಯವಸ್ಥೆಯ ಮೂಲಕ ಎರಡು ದಿನಕ್ಕೊಮ್ಮೆ ನೀರು ನೀಡಲಾಗುತ್ತಿತ್ತು. ಕೈಗಾರಿಕೆಗಳು ಬಂದ್ ಇದೆ, ಆದರೆ ಕೊರೋನಾ ಲಾಕ್‌ಡೌನ್‌ನಿಂದಾಗಿ ಜನರು ಮನೆಯಲ್ಲಿದ್ದು ಹೆಚ್ಚು ನೀರನ್ನು ಬಳಸುತ್ತಾರೆ. ಆದರೂ ಈ ವರ್ಷ ನೀರಿನ ಅಭಾವ ಉಂಟಾಗುವುದಿಲ್ಲ ಎಂದು ತಿಳಿಸಿದರು.
ಮನಪಾ ಆಯುಕ್ತ ಶಾಸನಾಡಿ ಅಜಿತ್ ಹೆಗ್ಡೆ ಮಾತನಾಡಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಡ್ಯಾಂನಲ್ಲಿ ಸಾಕಷ್ಟು ನೀರಿದೆ. ಕಳೆದ ವರ್ಷ ಮಾ. ೧೩ಕ್ಕೆ ಎಎಂಆರ್ ಡ್ಯಾಂನಿಂದ ಸೆಕೆಂಡ್ ಫಿಲ್ಲಿಂಗ್ ಮಾಡಿದ್ದೇವು. ಈ ಬಾರಿ ಫಸ್ಟ್ ಫಿಲ್ಲಿಂಗನ್ನು ಮಾ.೧೬ಕ್ಕೆ ಮಾಡಲಾಗಿದೆ. ಮುಂದಿನ ೫೦ ದಿವಸಕ್ಕೆ ಬೇಕಾಗುವಷ್ಟು ನೀರಿನ ಸಂಗ್ರಹ ತುಂಬೆ ಡ್ಯಾಂನಲ್ಲಿದೆ. ಕಳೆದ ವರ್ಷ ರೇಷನಿಂಗ್ ಮಾಡಲಾಗಿತ್ತು. ಈ ವರ್ಷ ರೇಷನಿಂಗ್ ಮಾಡುವ ಅಗತ್ಯ ಇಲ್ಲ . ಜೂನ್‌ಗಿಂತ ಮೊದಲು ಮಳೆ ಬಂದರೆ ಯಥೇಚ್ಛವಾಗಿ ನೀರು ಸಿಗಲಿದೆ. ನೀರಿನ ಲಭ್ಯತೆಯ ಬಗ್ಗೆ ಜನರಿಗೆ ಆತಂಕ ಬೇಡ ಎಂದರು.
ಈ ಸಂದರ್ಭ ಸಹಾಯಕ ಆಯುಕ್ತ ಸಂತೋಷ್ ಕುಮಾರ್, ಕಿರಿಯ ಎಂಜಿನಿಯರ್ ನರೇಶ್ ಶೆಣೈ, ಇಂಜಿನಿಯರ್‌ಗಳಾದ ರವಿಶಂಕರ್, ರಿಚರ್ಡ್ ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು. ಪ್ರಸ್ತುತ ತುಂಬೆ ವೆಂಟೆಡ್ ಡ್ಯಾಂನಲ್ಲಿ ೬ ಮೀಟರ್ ಹಾಗೂ ಎಎಂಆರ್ ಡ್ಯಾಂನಲ್ಲಿ ೧೬.೬ ಮೀಟರ್ ನೀರಿದೆ.

- Advertisement -
spot_img

Latest News

error: Content is protected !!