Tuesday, May 21, 2024
Homeತಾಜಾ ಸುದ್ದಿರಾಷ್ಟ್ರಪ್ರಶಸ್ತಿ ಗೌರವಕ್ಕೆ ಪಾತ್ರವಾದ ತುಳುವಿನ “ಜೀಟಿಗೆ”

ರಾಷ್ಟ್ರಪ್ರಶಸ್ತಿ ಗೌರವಕ್ಕೆ ಪಾತ್ರವಾದ ತುಳುವಿನ “ಜೀಟಿಗೆ”

spot_img
- Advertisement -
- Advertisement -

ಮಂಗಳೂರು: ತುಳುನಾಡಿನ ಕಲಾರಾಧನೆಯ ಸೊಗಡಿನಲ್ಲಿ ನಿರ್ಮಾಣವಾದ “ಜೀಟಿಗೆ’ ತುಳು ಸಿನೆಮಾ, 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ “ಅತ್ಯುತ್ತಮ ಪ್ರಾದೇಶಿಕ ಚಿತ್ರ’ ಎಂಬ ಗೌರವಕ್ಕೆ ಪಾತ್ರವಾಗಿದೆ. ತುಳು ಸಿನೆಮಾಕ್ಕೆ ಸಿಗುವ ಏಳನೇ ರಾಷ್ಟ್ರೀಯ ಪ್ರಶಸ್ತಿ ಇದಾಗಿದ್ದು ಇದಕ್ಕೂ ಮುನ್ನ “ಬಂಗಾರ್ ಪಡ್ಲೆàರ್”, “ಕೋಟಿ ಚೆನ್ನಯ”, “ಗಗ್ಗರ”, “ಮದಿಪು’, “ಪಡ್ಡಾಯಿ”, “ಪಿಂಗಾರ ಸಿನೆಮಾಗಳು ರಾಷ್ಟ್ರೀಯ ಗೌರವಕ್ಕೆ ಪಾತ್ರವಾಗಿದ್ದವು.

ಸಂತೋಷ್ ಮಾಡ ನಿರ್ದೇಶನ ಹಾಗೂ ಅರುಣ್ ರೈ ತೋಡಾರ್ ನಿರ್ಮಾಣ, ನವೀನ್ ಡಿ. ಪಡೀಲ್ ಅವರ ಮುಖ್ಯ ತಾರಾಗಣದಲ್ಲಿ “ಜೀಟಿಗೆ’ ಸಿದ್ಧವಾಗಿದೆ. ಸಂತೋಷ್ ಮಾಡ ಅವರ ಮೊದಲ ಸಿನೆಮಾ ನಿರ್ದೇಶನವೇ “ರಾಷ್ಟ್ರೀಯ ಪ್ರಶಸ್ತಿ’ಗೆ ಭಾಜನವಾಗಿರುವುದು ವಿಶೇಷ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ 15 ದಿನದಲ್ಲಿ ಶೂಟಿಂಗ್ ಕಂಡ “ಜೀಟಿಗೆ’ ಇನ್ನಷ್ಟೇ ತೆರೆಕಾಣಬೇಕಿದೆ.

ತುಳುನಾಡಿನ ದೈವಾರಾಧನೆ ಮತ್ತು ಅನನ್ಯ ಕಟ್ಟುಪಾಡುಗಳನ್ನು ಬಿಂಬಿಸುವ ಕಲಾತ್ಮಕ ಚಿತ್ರ ವಿದು. ನವೀನ್ ಡಿ. ಪಡೀಲ್, ರೂಪ ವರ್ಕಾಡಿ, ಜೆ.ಪಿ. ತೂಮಿನಾಡ್, ಚೇತನ್ ರೈ ಮಾಣಿ, ಅರುಣ್ ರೈ ಸಹಿತ ಹಲವರು ತಾರಾಗಣದಲ್ಲಿದ್ದಾರೆ. ಚಿತ್ರಕಥೆ, ಸಂಭಾಷಣೆ ಶಶಿರಾಜ್ ಕಾವೂರು ಅವರದ್ದು. ಉನ್ನಿ ಮಡವುರ್ ಕೆಮರಾ, ಸ್ಯಾಕ್ರೋಫೋನ್ ಜಯರಾಮ್ ಸಂಗೀತವಿದೆ.

- Advertisement -
spot_img

Latest News

error: Content is protected !!