Friday, June 5, 2026
Homeಕೊಡಗುಕೊಡಗಿನ ಖಾಸಗಿ ಶಾಲೆಯಲ್ಲಿ ತ್ರಿಶೂಲ ದೀಕ್ಷೆ ಆರೋಪ

ಕೊಡಗಿನ ಖಾಸಗಿ ಶಾಲೆಯಲ್ಲಿ ತ್ರಿಶೂಲ ದೀಕ್ಷೆ ಆರೋಪ

- Advertisement -
- Advertisement -

ಮಡಿಕೇರಿ: ಕೊಡಗು ಜಿಲ್ಲೆಯ ಖಾಸಗಿ ಶಾಲೆಯಲ್ಲಿ ತ್ರಿಶೂಲ ದೀಕ್ಷೆಯ ಆರೋಪ ವ್ಯಕ್ತವಾಗಿದೆ.

ಪೊನ್ನಂಪೇಟೆ ತಾಲೂಕಿನ ಶ್ರೀ ಸಾಯಿ ಶಂಕರ ವಿದ್ಯಾ ಮಂದಿರದಲ್ಲಿ ತ್ರಿಶೂಲ ದೀಕ್ಷೆ ನೀಡಿರುವ ಆರೋಪ ಕೇಳಿ ಬಂದಿದೆ.

ಶಿಕ್ಷಣ ಸಂಸ್ಥೆಯಲ್ಲಿ ಕೆಲವು ದಿನಗಳ ಹಿಂದೆ ನಡೆದಿದ್ದ
ತ್ರಿಶೂಲ ದೀಕ್ಷೆ ಎಂದು ಹೇಳಲಾಗಿದೆ.

ಶಾಲೆಯಲ್ಲಿ ಶೌರ್ಯ ಪ್ರಶಿಕ್ಷಣ ವರ್ಗ ಶಿಬಿರ‌ ನಡೆದಿದ್ದು, ಬಜರಂಗದಳ ವತಿಯಿಂದ‌ ಶಿಬಿರ ಆಯೋಜಿಸಲಾಗಿತ್ತು‌ ಎಂದು ಹೇಳಲಾಗಿದೆ.

ಮೇ 7 ರಿಂದ ಶಾಲೆಯಲ್ಲಿ ಕಾರ್ಯಾಗಾರ ನಡೆಯುತ್ತಿದ್ದು,
50 ಕ್ಕೂ ಅಧಿಕ ಕಾರ್ಯಕರ್ತರಿಗೆ ವಿವಿಧ ಶಸ್ತ್ರಾಸ್ತ್ರ ತರಬೇತಿ ನೀಡಲಾಗಿದೆ ಎಂದು ಹೇಳಲಾಗಿದೆ.

ಶಿಕ್ಷಣ ಪ್ರಾಂತ ಭಜರಂಗದಳ‌ ಸಂಯೋಜಕ ರಘು ಸಕಲೇಶ್ ಪುರ, ಸಹ ಸಂಯೋಜಕ‌ ಕೃಷ್ಣಮೂರ್ತಿ ಸಾಯಿ ಶಂಕರ ವಿದ್ಯಾಸಂಸ್ಥೆ ಅಧ್ಯಕ್ಷ ಝರು ಗಣಪತಿ ಸೇರಿ ಹಲವರು ಭಾಗಿಯಾಗಿದ್ದರು.

- Advertisement -

Latest News

error: Content is protected !!