Wednesday, May 8, 2024
Homeಕರಾವಳಿಮಂಗಳೂರಿನಲ್ಲಿ ದರ್ಗಾ ನವೀಕರಣ ವೇಳೆ ದೇವಾಲಯ ಮಾದರಿ ಪತ್ತೆ ಹಿನ್ನೆಲೆ: ಹಿಂದೂ ಸಂಘಟನೆಗಳಿಂದ ಅಷ್ಟಮಂಗಲ ಪ್ರಶ್ನೆಯ...

ಮಂಗಳೂರಿನಲ್ಲಿ ದರ್ಗಾ ನವೀಕರಣ ವೇಳೆ ದೇವಾಲಯ ಮಾದರಿ ಪತ್ತೆ ಹಿನ್ನೆಲೆ: ಹಿಂದೂ ಸಂಘಟನೆಗಳಿಂದ ಅಷ್ಟಮಂಗಲ ಪ್ರಶ್ನೆಯ ಚಿಂತನೆ

spot_img
- Advertisement -
- Advertisement -

ಮಂಗಳೂರು: ಮಂಗಳೂರು ಹೊರವಲಯದ ಗಂಜಿಮಠದಲ್ಲಿ ನವೀಕರಣಕ್ಕಾಗಿ ದರ್ಗಾ ಕೆಡವಿದಾಗ ದೇವಸ್ಥಾನದ ಮಾದರಿ ಪತ್ತೆಯಾಗಿರುವ ವಿಚಾರದಲ್ಲಿಅಷ್ಟಮಂಗಲ ಪ್ರಶ್ನೆಯ ಮೊರೆ ಹೋಗಲು ಚಿಂತನೆ ನಡೆದಿದೆ.

ಸದ್ಯ ಅದು ದರ್ಗಾವೇ, ದೇವಸ್ಥಾನವೇ ಅಥವಾ ಬಸದಿಯೇ ಎಂಬ ಬಗ್ಗೆ ಗೊಂದಲ ಇದ್ದು, ಅಷ್ಟಮಂಗಲ ಪ್ರಶ್ನೆಗೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಚಿಂತನೆ ನಡೆಸಿವೆ ಎಂದು ಹೇಳಲಾಗಿದೆ.

ಸದ್ಯ ಕೋರ್ಟ್ ನಿಂದ ದರ್ಗಾ ಕಾಮಗಾರಿಗೆ ತಡೆಯಾಜ್ಞೆ ಇದ್ದು, ಅಷ್ಟ ಮಂಗಲ ಪ್ರಶ್ನೆಯ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಾಗಿದೆ ಎನ್ನಲಾಗಿದೆ.

ದರ್ಗಾ ಇರುವ ಜಾಗದಲ್ಲಿ ದೇವಸ್ಥಾನ ಇತ್ತು ಎಂದು ವಿಶ್ವ ಹಿಂದೂ ಪರಿಷತ್ ವಾದಿಸಿದ್ದು, ಈಗಾಗಲೇ ಹಳೆಯ ಭೂ ದಾಖಲೆಗಳ ಪರಿಶೀಲನೆಯನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ನಡೆಸುತ್ತಿದೆ. ಸದ್ಯ ಮಳಲಿಯ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ದರ್ಗಾದಲ್ಲಿ ನವೀಕರಣ ಕಾಮಗಾರಿ ಸ್ಥಗಿತಗೊಂಡಿದ್ದು, ನವೀಕರಣದ ಸಲುವಾಗಿ ಮುಂಭಾಗ ಕೆಡವಲಾಗಿತ್ತು.

- Advertisement -
spot_img

Latest News

error: Content is protected !!