Friday, June 5, 2026
Homeಕರಾವಳಿಪುತ್ತೂರು;  ಕುಂಬ್ರದಲ್ಲಿ ಹೋಟೆಲ್ ಬಳಿ ನಿಲ್ಲಿಸಲಾಗಿದ್ದ  ಸ್ಕೂಟರ್ ಕಳವಿಗೆ ಯತ್ನ; ಕಳ್ಳತನ ಯತ್ನದ ದೃಶ್ಯ ಸಿಸಿಟಿವಿಯಲ್ಲಿ...

ಪುತ್ತೂರು;  ಕುಂಬ್ರದಲ್ಲಿ ಹೋಟೆಲ್ ಬಳಿ ನಿಲ್ಲಿಸಲಾಗಿದ್ದ  ಸ್ಕೂಟರ್ ಕಳವಿಗೆ ಯತ್ನ; ಕಳ್ಳತನ ಯತ್ನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

- Advertisement -
- Advertisement -

ಪುತ್ತೂರು;  ಹೊಟೇಲೊಂದರ  ಬಳಿ ನಿಲ್ಲಿಸಲಾಗಿದ್ದ ಸ್ಕೂಟರನ್ನು ಕಳವು ಮಾಡಲು ಯತ್ನಿಸಿದ ಘಟನೆ ಕುಂಬ್ರದಲ್ಲಿ ನಡೆದಿದೆ. ಇನ್ನು  ಕಳವಿಗೆ ಯತ್ನ ನಡೆಸಿದ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪುತ್ತೂರಿನ ಕುಂಬ್ರದ  ರಾಯಲ್ ದರ್ಬಾರ್ ಹೊಟೇಲ್ ಮಾಲೀಕ ಹಮೀದ್  ಎಂಬವರು  ತನ್ನ ಸ್ಕೂಟರನ್ನು ಹೊಟೇಲ್ ಮುಂಭಾಗದಲ್ಲಿ ನಿಲ್ಲಿಸಿ ಮಂಗಳೂರಿಗೆ ತೆರಳಿದ್ದರು. ಮಂಗಳೂರಿನಿಂದ ಬರುವಾಗ ತಡವಾಗಿರುವ ಕಾರಣ ಸ್ಕೂಟರ್ ಕೊಂಡು ಹೋಗಿರಲಿಲ್ಲ.

ಅದೇ ದಿನ ರಾತ್ರಿ ಅಲ್ಲಿಗೆ ಸ್ಕೂಟರಿನಲ್ಲಿ ಬಂದ ಇಬ್ಬರು ಯುವಕರು ಸ್ಕೂಟರನ್ನು ಕಳವು ಮಾಡಲು ಯತ್ನ ನಡೆಸಿದ್ದಾರೆ.  ಸ್ಕೂಟರ್‌ನ ಹ್ಯಾಂಡ್ ಲಾಕ್ ಮಾಡಿರುವ ಕಾರಣ ಕೊಂಡೊಯ್ಯಲು ಸಾಧ್ಯವಾಗಿಲ್ಲ. ಆದರೂ ಸ್ಕೂಟರಿನಲ್ಲಿದ್ದ ಹೆಲ್ಮೆಟನ್ನು ಕಳವು ಮಾಡಿದ್ದು ಹಳೆಯ ಹೆಲ್ಮೆಟ್ ಅಲ್ಲಿ ಇಟ್ಟು ತೆರಳಿದ್ದಾರೆ.

ಹ್ಯಾಂಡ್ ಲಾಕ್ ಹಾಕಿರುವ ಕಾರಣ ಕಳ್ಳತನ ಮಾಡಲು ಸಾಧ್ಯವಾಗಿಲ್ಲ. ಘಟನೆಯ ಬಗ್ಗೆ ಗ್ರಾಮಾಂತರ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ದ್ವಿಚಕ್ರ ವಾಹನ ನಿಲ್ಲಿಸುವಾಗ ಲಾಕ್ ಮಾಡಿದ್ದರಿಂದ ಕಳ್ಳತನದ ಪ್ರಯತ್ನ ವಿಫಲವಾಗಿದೆ.

 

- Advertisement -

Latest News

error: Content is protected !!