Saturday, July 18, 2026
Homeಕರಾವಳಿಪುತ್ತೂರು: ಸಂಟ್ಯಾರಿನಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ

ಪುತ್ತೂರು: ಸಂಟ್ಯಾರಿನಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ

- Advertisement -
- Advertisement -

ಪುತ್ತೂರು: ಚಲಿಸುತ್ತಿದ್ದ ಕಾರಿನ‌ ಮೇಲೆ ಮರ ಬಿದ್ದ ಘಟನೆ  ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಟ್ಯಾರ್ ಸೇತುವೆ ಬಳಿಯ ತಿರುವು ರಸ್ತೆಯಲ್ಲಿ ನಡೆದಿದೆ.
ಚಲಿಸುತ್ತಿದ್ದ ಕಾರೊಂದರ ಮೇಲೆ ಹೆದ್ದಾರಿ ಬದಿಯಲ್ಲಿದ್ದ ಮರವೊಂದು ಬುಡ ಸಮೇತ ಉರುಳಿ ಬಿದ್ದಿದೆ.  ಕಾರಿನಲ್ಲಿದ್ದ ಮಗು ಸಹಿತ ಐವರು ಅಪಾಯದಿಂದ ಪಾರಾಗಿದ್ದಾರೆ.

ಕೊಯಿಲ ಗ್ರಾಮದ ಗಂಡಿಬಾಗಿಲು ನಿವಾಸಿ ಮಹಮ್ಮದ್ ಆಸಿಫ್ ಅವರು ಕುಂಬ್ರದಿಂದ ಪುತ್ತೂರು ಕಡೆಗೆ ಕುಟುಂಬ ಸಮೇತ ಕಾರಿನಲ್ಲಿ ಸಾಗುತ್ತಿದ್ದ ವೇಳೆ ಬೃಹತ್ ಮರ ಉರುಳಿ ಬಿದ್ದಿದೆ. ಆಸಿಫ್‌ ಪತ್ನಿ, ಅತ್ತೆ, ನಾದಿನಿ ಹಾಗೂ ಒಂದೂವರೆ ವರ್ಷದ ಮಗು ಪಾರಾಗಿದ್ದಾರೆ.

- Advertisement -

Latest News

error: Content is protected !!