Wednesday, May 15, 2024
Homeಕರಾವಳಿಕಾಸರಗೋಡುಕಾಸರಗೋಡು: ಬೈಕ್ ನಲ್ಲಿ ಏಕಾಂಗಿಯಾಗಿ ದೇಶ ಪರ್ಯಟನೆ ಮಾಡಿದ ಗಡಿನಾಡ ಕನ್ನಡತಿ

ಕಾಸರಗೋಡು: ಬೈಕ್ ನಲ್ಲಿ ಏಕಾಂಗಿಯಾಗಿ ದೇಶ ಪರ್ಯಟನೆ ಮಾಡಿದ ಗಡಿನಾಡ ಕನ್ನಡತಿ

spot_img
- Advertisement -
- Advertisement -

ಕಾಸರಗೊಂಡು: ಕಾಸರಗೋಡಿನ ಕುಂಬಳೆಯ ಕುಮಾರಿ ಅಮೃತಾ ಜೋಶಿ (21 ವರ್ಷ) ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ದೇಶದ ಏಕತೆಯನ್ನು ಸಾರಲು ಕಳೆದ 3 ತಿಂಗಳುಗಳಿಂದ ಏಕಾಂಗಿಯಾಗಿ ಬೈಕ್ ನಲ್ಲಿ ದೇಶಾದ್ಯಂತ ಪರ್ಯಟನೆ ಮಾಡಿ ಬಂದಿದ್ದಾರೆ. 

ಅಮೃತಾ ಜೋಶಿ ಮಂಗಳೂರಿನ ಕೆನರಾ ಹೈಸ್ಕೂಲ್​ನ ಹಳೇ ವಿದ್ಯಾರ್ಥಿನಿ ಕೂಡ ಹೌದು. ಇವರು ತಮ್ಮ ತಂದೆಯ ಇಚ್ಛೆಯಂತೆ ಬೈಕ್ ರೈಡಿಂಗ್​ ಅನ್ನು ಹವ್ಯಾಸ ಮಾಡಿಕೊಂಡಿದ್ದಾರೆ. ಅಮೃತಾ ಜೋಷಿ ಫೆ.4 ರಂದು ಕ್ಯಾಲಿಕಟ್​ನಿಂದ ಪಯಣ ಆರಂಭಿಸಿದ್ದರು. ತಮಿಳುನಾಡು, ಆಂಧ್ರಪ್ರದೇಶ ಸುತ್ತಿದ ಬಳಿಕ ಈಶಾನ್ಯ ದೇಶಗಳಿಗೆ ತಲುಪಿದ್ದರು. ಚೀನಾ ಬಾರ್ಡರ್ ತವಾಂಗ್​ನಲ್ಲಿ ಪಯಣ ಕೊನೆಗೊಳಿಸುವ ಗುರಿ ಹೊಂದಿದ್ದ ಅಮೃತಾ ಅಲ್ಲಿಂದ ಎಪ್ರಿಲ್ 8ರಂದು ಮತ್ತೆ ಪಯಣ ಮುಂದುವರಿಸುವ ನಿರ್ಧಾರ ಮಾಡಿದರು.

ಅಲ್ಲಿಂದ ನೇಪಾಳ, ಮ್ಯಾನ್ಮಾರ್​ ದೇಶಗಳಿಗೂ ತೆರಳಿದ್ದರು. ವಾಪಸ್ ಬರುವ ವೇಳೆ ಉತ್ತರಪ್ರದೇಶದಲ್ಲಿ ರಸ್ತೆ ಅಪಘಾತಕ್ಕೀಡಾದರು. ಆ ವೇಳೆ ಕೆಟಿಎಂ ಬೈಕ್ ಸಂಪೂರ್ಣ ಹಾಳಾಗಿದೆ. ಅಮೃತಾ ಚಿಕಿತ್ಸೆ ಪಡೆದುಕೊಂಡು ವೈದ್ಯರ ಸಲಹೆಯಂತೆ ಒಂದು ತಿಂಗಳು ಊರಿಗೆ ಬಂದು ವಿಶ್ರಾಂತಿ ತೆಗೆದುಕೊಂಡ ನಂತರ ಮತ್ತೆ ಅಪಘಾತ ನಡೆದ ಸ್ಥಳಕ್ಕೆ ಬೇರೊಂದು ಬೈಕ್ ತೆಗೆದುಕೊಂಡು ಹೋಗಿ ಅಲ್ಲಿಂದ ಪಯಣ ಮುಂದುವರಿಸಿದ್ದರು. ಲಡಾಖ್​, ಪಂಜಾಬ್, ರಾಜಸ್ಥಾನ ಜರ್ನಿ ಮುಗಿಸಿ ಇಂದು ಕರ್ನಾಟಕಕ್ಕೆ ಬಂದಿರುವ ಅಮೃತಾ ಇಂದು ತಾನು ವ್ಯಾಸಂಗ ಮಾಡಿದ ಮಂಗಳೂರಿನ ಕೆನರಾ ಹೈಸ್ಕೂಲ್ ಗೆ ಆಗಮಿಸಿದ್ದಾಳೆ. ಅಲ್ಲದೇ ಇಂದೇ ಕೇರಳ ತಲುಪಿ ಪಯಣ ಕೊನೆಗೊಳಿಸಲಿದ್ದಾರೆ.

- Advertisement -
spot_img

Latest News

error: Content is protected !!