Monday, May 6, 2024
Homeತಾಜಾ ಸುದ್ದಿಪ್ರವೀಣ್‌ ಕುಮಾರ್‌ ಬಿಡುಗಡೆ ವಿಚಾರ: ಅಧಿಕಾರಿಗಳ ಸಭೆ ನಡೆಸಿ ಅಂತಿಮ ನಿರ್ಧಾರ: ಆರಗ ಜ್ಞಾನೇಂದ್ರ

ಪ್ರವೀಣ್‌ ಕುಮಾರ್‌ ಬಿಡುಗಡೆ ವಿಚಾರ: ಅಧಿಕಾರಿಗಳ ಸಭೆ ನಡೆಸಿ ಅಂತಿಮ ನಿರ್ಧಾರ: ಆರಗ ಜ್ಞಾನೇಂದ್ರ

spot_img
- Advertisement -
- Advertisement -

ಬೆಂಗಳೂರು: 90ರ ದಶಕದಲ್ಲಿ ಕರಾವಳಿಯನ್ನು ಬೆಚ್ಚಿಬೀಳಿಸಿದ್ದ ಕೊಲೆ ಪ್ರಕರಣದಲ್ಲಿ ಸುದೀರ್ಘ 28 ವರ್ಷಗಳ ಜೈಲು ವಾಸದಲ್ಲಿದ್ದ ಪ್ರವೀಣ್ ಕುಮಾರ್ ಎಂಬಾತ ಬಿಡುಗಡೆಯಾಗುತ್ತಿದ್ದಾನೆ. ಆದರೆ ಆತನ ಕುಟುಂಬಸ್ಥರೇ ಅಪರಾಧಿಯನ್ನು ಬಿಡುಗಡೆ ಮಾಡದಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ಕರೆದಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಪ್ರವೀಣ್ ಕುಟುಂಬಸ್ಥರು ಇಂದು ಆರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ ಬಿಡುಗಡೆ ಮಾಡದಂತೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಸಚಿವರು,  ಇದೊಂದು ವಿಶೇಷ ಕೇಸ್. ಇಂದು ಅಧಿಕಾರಿಗಳ ಸಭೆ ಕರೆದಿದ್ದೇನೆ. ಕಾನೂನಿನ ಪ್ರಕಾರ ಏನು ಮಾಡಲು ಸಾಧ್ಯವೋ ಅದನ್ನು ಮಾಡ್ತೀವಿ. ಎರಡು ಕುಟುಂಬಕ್ಕೆ ಭದ್ರತೆ ಕೊಡ್ತೀವಿ. ಕಳೆದ ಕ್ಯಾಬಿನೆಟ್‍ನಲ್ಲಿ ಕೊಲೆ ಮಾಡಿದವರಿಗೆ, ರೇಪ್ ಮಾಡಿದವರನ್ನು ಬಿಡಬಾರದು ಎಂದು ನಿಯಮ ಮಾಡಿದ್ದೇವೆ. ಇನ್ನು ಮೇಲೆ ಇಂತಹ ಕೇಸ್‍ನಲ್ಲಿ ಅಪರಾಧಿಯನ್ನು ಬಿಡುಗಡೆ ಮಾಡುವುದಿಲ್ಲ. ಹಿಂದಿನ ನಿಯಮದ ಪ್ರಕಾರ ಈತನಿಗೆ ಬಿಡುಗಡೆಗೆ ಶಿಫಾರಸು ಬಂದಿದೆ. ಇವತ್ತು ಅಧಿಕಾರಿಗಳ ಸಭೆ ಮಾಡಿ ಅಂತಿಮ ನಿರ್ಧಾರ ಮಾಡ್ತೀವಿ. 4 ಜನರನ್ನು ಕೊಂದಿದ್ದಾನೆ. ಅವನು ಸೈಕೋ ಅನ್ನಿಸುತ್ತದೆ ಎಂದಿದ್ದಾರೆ.

- Advertisement -
spot_img

Latest News

error: Content is protected !!