Tuesday, July 1, 2025
Homeಇತರಉಡುಪಿ: ಆನ್ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು 1. 6 ಲಕ್ಷ ರೂ ಕಳೆದುಕೊಂಡ ಯುವತಿ...!

ಉಡುಪಿ: ಆನ್ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು 1. 6 ಲಕ್ಷ ರೂ ಕಳೆದುಕೊಂಡ ಯುವತಿ…!

spot_img
- Advertisement -
- Advertisement -

ಉಡುಪಿ: ಆನ್ ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ಮಹಿಳೆಯೊಬ್ಬರನ್ನು ವಂಚಿಸಿದ ಘಟನೆ ನಡೆದಿದೆ.

ಉಡುಪಿಯ ಕೆ. ಅರ್ಚನಾ ನಾಯಕ್ ಅವರ ಮೊಬೈಲ್ ಗೆ ಅ.19ರಂದು ಪಾರ್ಟ್ ಟೈಮ್ ಜಾಬ್ ಮಾಡುವ ಬಗ್ಗೆ ಸಂದೇಶ ಬಂದಿದ್ದು, ಅದರಲ್ಲಿದ್ದ ವಾಟ್ಸ್ ಆಪ್ ಸಂಖ್ಯೆಯನ್ನು ಸಂಪರ್ಕಿಸಿದಾದ ಅದರಲ್ಲಿ ಬಯೋಡಾಟಾ ಭರ್ತಿ ಮಾಡಿ ಅದರಂತೆ ಅವರು ನೋಂದಣಿ ಮಾಡಿಕೊಂಡಿದ್ದರು.

ಇದು ಇಂಡಿಯನ್ ಎಫ್ ಕೆ ಮಾಲ್ ಕಂಪನಿಯಾಗಿದ್ದು ಈ ಕಂಪನಿಯಲ್ಲಿ ಒಂದು ಸೊತ್ತು ಖರೀದಿ ಮಾಡಿ, ಅದನ್ನು ಆನ್ ಲೈನ್ ಮೂಲಕ ಮಾರಾಟ ಮೂಲಕ ಮಾರಾಟ ಮಾಡಿದ್ದಲ್ಲಿ ಅಸಲು ಮೊತ್ತ ಹಾಗೂ ಅದಕ್ಕೆ ಕಮಿಶನ್ ಪಡೆಯುವುದು ಟಾಸ್ಕ್ ನೀಡಿದ್ದರು ಎನ್ನಲಾಗಿದೆ.

ಅದರಂತೆ ಅರ್ಚನಾ ಕಂಪೆನಿಯಲ್ಲಿ ರಿಜಿಸ್ಟರ್ ಮಾಡಿಕೊಂಡಿದ್ದ ಯೂಸರ್ ಐ.ಡಿ.ಯನ್ನು ಬಳಸಿ, ಒಟ್ಟು 1,06,900ರೂ. ಮೌಲ್ಯದ ಸೊತ್ತುಗಳನ್ನು ಆನ್‌ಲೈನ್ ಮೂಲಕ ಖರೀದಿಸಿದ್ದರು. ಆದರೆ ಅರ್ಚನಾ ಅವರು ನೀಡಿದ ಹಣ ಹಾಗೂ ಲಾಭಾಂಶವನ್ನು ನೀಡದೆ ವಂಚಿಸಿರುವುದಾಗಿ ದೂರಲಾಗಿದೆ. ಕೊನೆಗೆ ಅವರು ಉಡುಪಿ ಸೆನ್ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ.

- Advertisement -
spot_img

Latest News

error: Content is protected !!