Thursday, June 4, 2026
Homeಕರಾವಳಿಮಂಗಳೂರು: ವಿಮಾನದಲ್ಲಿ ಬಂದು ರೈಲಿನಲ್ಲಿ ಕಳ್ಳತನ ಮಾಡುತ್ತಿದ್ದ ಹೈಟೆಕ್ ಕಳ್ಳರ ಬಂಧನ

ಮಂಗಳೂರು: ವಿಮಾನದಲ್ಲಿ ಬಂದು ರೈಲಿನಲ್ಲಿ ಕಳ್ಳತನ ಮಾಡುತ್ತಿದ್ದ ಹೈಟೆಕ್ ಕಳ್ಳರ ಬಂಧನ

- Advertisement -
- Advertisement -

ಮಂಗಳೂರು: ವಿಮಾನದಲ್ಲಿ ಬಂದು ರೈಲಿನಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಹೈಟೆಕ್ ಕಳ್ಳರನ್ನು ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಅಭಯರಾಜ್ ಸಿಂಗ್(26), ಹರಿಶಂಕರ್ ಗಿರಿ (25) ಬಂಧಿತರು.

ಸೆ.28ರಂದು ಮಂಗಳೂರು- ಸುರತ್ಕಲ್ ಮಧ್ಯೆ ರೈಲಿನಲ್ಲಿ ಪ್ರಯಾಣಿಕರ ಸುಲಿಗೆಯಾಗಿತ್ತು. ಈ ವೇಳೆ ರೈಲಿನಲ್ಲಿದ್ದ ಅಭಯರಾಜ್ ಸಿಂಗ್ , ಹರಿಶಂಕರ್ ಗಿರಿಯನ್ನು ರೈಲ್ವೇ ಪೊಲೀಸರು ಸಂದೇಹದ ಮೇಲೆ ಬಂಧಿಸಿದ್ದರು. ಇಬ್ಬರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೃತ್ಯ ಬಯಲಾಗಿದೆ.

ಆರೋಪಿಗಳು ರಾತ್ರಿ ವೇಳೆ ಕೊಂಕಣ ರೈಲ್ವೇಯಲ್ಲಿ ಪ್ರಯಾಣಿಕರ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದರು.ಕೇರಳ, ಕರ್ನಾಟಕದ ರೈಲಿನಲ್ಲಿ ಚಿನ್ನ ಕದ್ದು ವಿಮಾನದಲ್ಲಿ ಪರಾರಿಯಾಗುತ್ತಿದ್ದರು.ಬಂಧಿತರಿಂದ  125 ಗ್ರಾಮ್ ಚಿನ್ನಾಭರಣವನ್ನು ರೈಲ್ವೇ ಪೊಲೀಸರ ವಶಕ್ಕೆ ಪಡೆದಿದ್ದಾರೆ.

- Advertisement -

Latest News

error: Content is protected !!