Thursday, July 16, 2026
Homeಕರಾವಳಿಬಂಟ್ವಾಳ: ಕೆಎಸ್ ಆರ್ ಟಿಸಿ ಬಸ್ ಹತ್ತುವಾಗ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

ಬಂಟ್ವಾಳ: ಕೆಎಸ್ ಆರ್ ಟಿಸಿ ಬಸ್ ಹತ್ತುವಾಗ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

- Advertisement -
- Advertisement -

ಬಂಟ್ವಾಳ: ಕೆಎಸ್ ಆರ್ ಟಿಸಿ ಬಸ್ ಹತ್ತುವಾಗ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಬಂಟ್ವಾಳ ದಲ್ಲಿ ಘಟನೆ ನಡೆದಿದೆ.

ಬಿಸಿರೋಡು ಬಸ್ ನಿಲ್ದಾಣದಲ್ಲಿ ಮಂಗಳೂರಿನ ಕಾಲೇಜೊಂದಕ್ಕೆ ತೆರಳುವ ವಿದ್ಯಾರ್ಥಿನಿ ಕೆ.ಎಸ್.ಆರ್.ಟಿ‌.ಸಿ ಬಸ್ ಹತ್ತುವಾಗ ‌ಹಿಂಬದಿಯಿಂದ ಇದ್ದ ಅಪರಿಚಿತ ವ್ಯಕ್ತಿ ಲೈಂಗಿಕ ‌ಕಿರುಕುಳ ನೀಡಿದ್ದಾನೆ.ಈ ಬಗ್ಗೆ ಪ್ರಶ್ನಿಸಿದಾಗ ಆತ ವಿದ್ಯಾರ್ಥಿನಿ ಗೆಬೆದರಿಸಿದ್ದಲ್ಲದೆ, ಮುಂದೆಯೇ ಇದೇ ರೀತಿ ಕಿರುಕುಳ ನೀಡುತ್ತೇನೆ ಏನು ಮಾಡುತ್ತಿ ಎಂದು ಹೆದರಿಸಿದ್ದಾನೆ ಎಂದು ಹೇಳಲಾಗಿದೆ.

ಈ ಬಗ್ಗೆ ನಿರ್ವಾಹಕನಿಗೆ ವಿದ್ಯಾರ್ಥಿನಿ ದೂರು ನೀಡಿದ್ದು, ಪ್ರಯಾಣಿಕ ಹಾಗೂ ನಿರ್ವಾಹಕನ ನಡುವೆ ಮಾತು ಬೆಳೆದಿದೆ ಎನ್ನಲಾಗಿದೆ.ಬಸ್ ನಲ್ಲಿ ನಡೆದ ಘಟನೆ ಬಗ್ಗೆ ಸ್ಥಳದಿಂದಲೇ ವಿದ್ಯಾರ್ಥಿನಿ ಪೋನ್ ಮಾಡಿ ಮನೆಯವರಿಗೆ ವಿಷಯ  ತಿಳಿಸಿದ್ದಾಳೆ.

ಪೋಷಕರು ಮತ್ತು ವಿದ್ಯಾರ್ಥಿನಿ ಕೂಡಲೇ ಪೋಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.ದೂರು ನೀಡಿದ ಕೂಡಲೇ ಪ್ರಕರಣ ದಾಖಲಿಸಿಕೊಂಡು, ಕಾರ್ಯಪ್ರವೃತ್ತರಾದ ನಗರ ಠಾಣಾ ಪೋಲೀಸರು ಅಪರಿಚಿತ ಆರೋಪಿಯನ್ನು ಪತ್ತೆ ಹಚ್ಚಿ ಆತನ ಮೇಲೆ ಕಾನೂನು ‌ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!