Monday, June 8, 2026
Homeಕರಾವಳಿಬೆಳ್ತಂಗಡಿ: ಹಿಂಸಾತ್ಮಕ ರೀತಿಯಲ್ಲಿ ಗೋವುಗಳ ಸಾಗಾಟ; ಮೂವರು ಆರೋಪಿಗಳ ಬಂಧನ

ಬೆಳ್ತಂಗಡಿ: ಹಿಂಸಾತ್ಮಕ ರೀತಿಯಲ್ಲಿ ಗೋವುಗಳ ಸಾಗಾಟ; ಮೂವರು ಆರೋಪಿಗಳ ಬಂಧನ

- Advertisement -
- Advertisement -

ಬೆಳ್ತಂಗಡಿ: ವಾಹನವೊಂದರಲ್ಲಿ ಹಿಂಸಾತ್ಮಕ ರೀತಿಯಲ್ಲಿ ಗೋವುಗಳನ್ನು ಸಾಗಿಸುತ್ತಿದ್ದ ವಾಹನವನ್ನು ಸ್ಥಳೀಯರ ಸಹಕಾರದಲ್ಲಿ  ಪೊಲೀಸರು  ಹಿಡಿದ ಘಟನೆ ನಡ ಗ್ರಾಮದ ನರಸಿಂಹ ಗಡ ರಸ್ತೆಯಲ್ಲಿ ನಡೆದಿದೆ.

ಕ್ವಾಲೀಸ್ ವಾಹನವೊಂದು ಸಂಶಯಸ್ಪದವಾಗಿ ಸಂಚರಿಸುತ್ತಿದ್ದ ಬಗ್ಗೆ  ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ವಾಹನವನ್ನು ನಿಲ್ಲಿಸಲು ಸೂಚಿಸಿದರೂ ಪೊಲೀಸರ ಮೇಲೆಯೇ ವಾಹನ ಚಲಾಯಿಸಿ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟಾಗ ಸ್ಥಳೀಯರ ಸಹಕಾರದಲ್ಲಿ ಪೊಲೀಸರು ವಾಹನವನ್ನು ತಡೆದಿದ್ದಾರೆ .ಆಗ ಚಾಲಕ ತಪ್ಪಿಸಿಕೊಂಡಿದ್ದು 3 ಮಂದಿ ಆರೋಪಿಗಳು ಸಿಕ್ಕಿಹಾಕಿಕೊಂಡಿದ್ದಾರೆ.

ವಾಹನದಲ್ಲಿ ಎರಡು ದನ ,ಒಂದು ಕರುವನ್ನು ಹಿಂಸಾತ್ಮಕ ರೀತಿಯಲ್ಲಿ ಗುರುವಾಯನಕೆರೆ ಬಳಿಯ ಪಿಲಿಚಂಡಿ ಕಲ್ಲು ಎಂಬಲ್ಲಿಯ ಕಸಾಯಿಖಾನೆಗೆ ಸಾಗಿಸಲು ಯತ್ತಿಸುತ್ತಿದ್ದರು . ಒಳ ರಸ್ತೆಯ ಮೂಲಕ ಲಾಯಿಲ ಮುಂಡೂರು ರಸ್ತೆಯಲ್ಲಿ ಸಾಗಿಸಲು ಪ್ಲ್ಯಾನ್ ಮಾಡಿದ್ದರು ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!