Thursday, June 4, 2026
Homeಕರಾವಳಿಪುತ್ತೂರು; ಅನುಮಾನಾಸ್ಪದವಾಗಿ ಸ್ಕಾರ್ಫಿಯೋ ಕಾರಿನಲ್ಲಿ ಓಡಾಟ ಪ್ರಕರಣ: ಯುವಕನ ವಿರುದ್ಧ ಪ್ರಕರಣ ದಾಖಲು

ಪುತ್ತೂರು; ಅನುಮಾನಾಸ್ಪದವಾಗಿ ಸ್ಕಾರ್ಫಿಯೋ ಕಾರಿನಲ್ಲಿ ಓಡಾಟ ಪ್ರಕರಣ: ಯುವಕನ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಪುತ್ತೂರು; ಇಲ್ಲಿನ ಕೆಯ್ಯೂರಿನ ಎರಕ್ಕಳ ಎಂಬಲ್ಲಿ ಆಂಧ್ರಪ್ರದೇಶ ನೋಂದಣಿಯ ಸ್ಕಾರ್ಫಿಯೋದಲ್ಲಿ ಮುಂಜಾನೆಯಿಂದಲೇ ಅನುಮಾನಸ್ಪದವಾಗಿ ತಿರುಗಾಡಿಕೊಂಡಿದ್ದ ಯುವಕನನ್ನು ನಿನ್ನೆ ಪುತ್ತೂರು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದರು.

ಕಡಬ ತಾಲೂಕಿನ ಪೆರಾಬೆ ಕೋಚಕಟ್ಟೆ ನಿವಾಸಿ ಇಬ್ರಾಹಿಂ ಮುಸ್ಲಿಂಯಾರ್ ಅವರ ಪುತ್ರ ಮುಹಾದ್ (30) ಬಂಧಿತ ಆರೋಪಿ.ಇದೀಗ ಆತನನ್ನು ವಿಚಾರಣೆಗೆ ಒಳಪಡಿಸಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಆತ ಮಾದಕ ವಸ್ತು ಸೇವಿಸಿರೋದು ದೃಢವಾಗಿದೆ.ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ

- Advertisement -

Latest News

error: Content is protected !!