Tuesday, September 17, 2024
Homeಕರಾವಳಿಸುಳ್ಯ: ಕಟ್ಟಿಗೆ ಸಾಗಿಸುತ್ತಿದ್ದ ಟ್ರಾಕ್ಟರ್ ಪಲ್ಟಿ, ಅಡಿಗೆ ಸಿಲುಕಿ ಚಾಲಕ ದುರ್ಮರಣ

ಸುಳ್ಯ: ಕಟ್ಟಿಗೆ ಸಾಗಿಸುತ್ತಿದ್ದ ಟ್ರಾಕ್ಟರ್ ಪಲ್ಟಿ, ಅಡಿಗೆ ಸಿಲುಕಿ ಚಾಲಕ ದುರ್ಮರಣ

spot_img
- Advertisement -
- Advertisement -

ಸುಳ್ಯ: ಟ್ರಾಕ್ಟರ್ ಮಗುಚಿ ಬಿದ್ದು ಅದರ ಅಡಿಗೆ ಸಿಲುಕಿ ತಾಲೂಕಿನ ಕಲ್ಮಕಾರು ಗ್ರಾಮದ ದಬ್ಬಡ್ಕ ವೆಂಕಪ್ಪ ಗೌಡ ಮೃತಪಟ್ಟಿದ್ದಾರೆ.

ಮನೆ ಬಳಿ ಟ್ರಾಕ್ಟರ್ ನಲ್ಲಿ ಕಟ್ಟಿಗೆ ಸಾಗಿಸುತ್ತಿದ್ದಾಗ ಇಳಿಜಾರು ಪ್ರದೇಶದಲ್ಲಿ ಟ್ರಾಕ್ಟರ್ ನ್ಯೂಟ್ರಲ್ ಆಗಿ ವೇಗವಾಗಿ ಚಲಿಸಿ ಬದಿಗೆ ಸರಿದು ಮಗುಚಿ ಬಿತ್ತೆನ್ನಲಾಗಿದೆ. ಈ ವೇಳೆ ಚಾಲಕ ವೆಂಕಪ್ಪ ಗೌಡ ಅವರು ಟ್ರಾಕ್ಟರ್ ಅಡಿಗೆ ಸಿಲುಕಿ ಸ್ಥಳದಲ್ಲೇ ಮೃತರಾದರೆಂದು ತಿಳಿದು ಬಂದಿದೆ.

75 ವರ್ಷ ವಯಸ್ಸಿನ ವೆಂಕಪ್ಪ‌ ಗೌಡರು ಪತ್ನಿ ಶಾರದ, ಮಕ್ಕಳಾದ ಸುರೇಶ, ವಿಶ್ವನಾಥ, ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

- Advertisement -
spot_img

Latest News

error: Content is protected !!