Thursday, July 18, 2024
Homeತಾಜಾ ಸುದ್ದಿಮಸೀದಿಯೊಳಗೆ ಗುಂಪು ಸೇರಿ ನಮಾಜ್: ಒಳಗೆ ನುಗ್ಗಿ ಖಡಕ್ ವಾರ್ನಿಂಗ್ ಕೊಟ್ಟ ಕೋಲಾರ ಮಹಿಳಾ...

ಮಸೀದಿಯೊಳಗೆ ಗುಂಪು ಸೇರಿ ನಮಾಜ್: ಒಳಗೆ ನುಗ್ಗಿ ಖಡಕ್ ವಾರ್ನಿಂಗ್ ಕೊಟ್ಟ ಕೋಲಾರ ಮಹಿಳಾ ತಹಶೀಲ್ದಾರ್

spot_img
- Advertisement -
- Advertisement -

ಕೋಲಾರ: ಲಾಕ್ ಡೌನ್ ನಿಯಮ ಉಲ್ಲಂಘಿಸಿ ಮಸೀದಿಯೊಳಗೆ ಗುಂಪು ಸೇರಿ ನಮಾಜ್ ಮಾಡುತ್ತಿದ್ದವರನ್ನು ಕೋಲಾರ ತಹಶೀಲ್ದಾರ್ ಶೋಭಿತಾ ವಶಕ್ಕೆ ಪಡೆದಿದ್ದಾರೆ.

ಕೊರೊನಾದಿಂದಾಗಿ ಲಾಕ್ ಡೌನ್ ವಿಧಿಸಲಾಗಿದೆ. ಕೊರೊನಾ ಪ್ರಕರಣಗಳೂ ಹೆಚ್ಚಾಗುತ್ತಿರುವ ಕಾರಣ ಜನರು ಸಾಮೂಹಿಕವಾಗಿ ಎಲ್ಲೂ ಸೇರಬಾರದು, ದೇವಸ್ಥಾನ, ಮಸೀದಿ, ಚರ್ಚ್ ಗಳಲ್ಲಿ ಎಲ್ಲೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸಬಾರದು ಎಂಬ ನಿರ್ಬಂಧ ಹೇರಲಾಗಿದೆ. ಆದರೆ ಈ ಕಾನೂನು ಉಲ್ಲಂಘಿಸಿ ಮಸೀದಿಯಲ್ಲಿ ನಮಾಜ್ ಮಾಡುತ್ತಿದ್ದವರಿಗೆ ಪಾಠ ಕಲಿಸಲು ತಹಶೀಲ್ದಾರ್ ಶೋಭಿತಾ ಅವರು ಮಸೀದಿ ಪ್ರವೇಶಿಸಿದ್ದಾರೆ.

ಮಹಿಳೆಯರಿಗೆ ಮಸೀದಿಯೊಳಗೆ ನಿರ್ಬಂಧದ ನಡುವೆಯೂ ಮಸೀದಿಯೊಳಗೆ ತೆರಳಿದ ಶೋಭಿತಾ, ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ ಮಸೀದಿಯಲ್ಲಿ ನಮಾಜ್ ಮಾಡುತ್ತಿದ್ದ ಹನ್ನೊಂದು ಜನರನ್ನು ವಶಕ್ಕೆ ಪಡೆದಿದ್ದಾರೆ. ಮಸೀದಿಗೆ ನುಗ್ಗಿದ ತಹಶೀಲ್ದಾರ್ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ನಮಾಜ್ ಮಾಡುತ್ತಿರುವ ಮಾಹಿತಿ ಮೇರೆಗೆ ಕೋಲಾರ ನಗರದ ಮುನಿಸಿಪಾಲ್ ಆಸ್ಪತ್ರೆ ಮುಂಭಾಗದ ಮಸೀದಿಗೆ ನುಗ್ಗಿದ ಶೋಭಿತಾ ಅವರು, ಲಾಕ್ ಡೌನ್ ಸಮಯದಲ್ಲಿ ನಮಾಜ್ ಮಾಡಲು ನಿಮಗೆ ಯಾರು ಹೇಳಿದ್ದು, ಇವರೆಲ್ಲರನ್ನೂ ಇಲ್ಲಿಯೇ ಕೂಡಿಹಾಕಿ. ಯಾರನ್ನೂ ಹೊರಗೆ ಬಿಡಬೇಡಿ ಎಂದು ಹೇಳಿ ಕಾನೂನು ಉಲ್ಲಂಘನೆ ಮಾಡಿದ ಹನ್ನೊಂದು ಜನರನ್ನು ವಶಕ್ಕೆ ಪಡೆದಿದ್ದಾರೆ.

- Advertisement -
spot_img

Latest News

error: Content is protected !!