Thursday, June 4, 2026
Homeಅಪರಾಧದಾಂಡೇಲಿಯಲ್ಲಿ ಪ್ರವಾಸಕ್ಕೆ ಬಂದಿದ್ದ ಛತ್ತೀಸ್ ಗಢದ ವಿದ್ಯಾರ್ಥಿನಿ ಸಾವು

ದಾಂಡೇಲಿಯಲ್ಲಿ ಪ್ರವಾಸಕ್ಕೆ ಬಂದಿದ್ದ ಛತ್ತೀಸ್ ಗಢದ ವಿದ್ಯಾರ್ಥಿನಿ ಸಾವು

- Advertisement -
- Advertisement -

ಕಾರವಾರ: ದಾಂಡೇಲಿ ಪ್ರವಾಸಕ್ಕೆ ಬಂದು ಛತ್ತಿಸ್ ಗಢ‌ ರಾಜ್ಯದ ಯುವತಿಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಬಿರಂಪಾಲಿ- ಅಕೋರ್ಡಾ ಎಂಬಲ್ಲಿ ಛತ್ತಿಸಗಢದ ದೇವಿಕಾ ಸಂಜಯ್ ವಾಸವಣೆ (25) ಸಾವನ್ನಪ್ಪಿದ್ದಾರೆ.

ಸೈಕ್ಲಿಂಗ್ ಮಾಡುವಾಗ ಆಯತಪ್ಪಿ ಮರಕ್ಕೆ ಢಿಕ್ಕಿ ಹೊಡೆದು ಬಿದ್ದ ಕಾರಣ ಯುವತಿ ಮೃತಪಟ್ಟಿದ್ದಾರೆ. ತಲೆಭಾಗಕ್ಕೆ ಪೆಟ್ಟಾಗಿ ಮೂಗಿನಿಂದ ರಕ್ತ ಸ್ರಾವವಾಗಿದ್ದು, ದೇವಿಕಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಹಿಡನ್ ವ್ಯಾಲಿ ಹೋಮ್ ಸ್ಟೇನಲ್ಲಿ ಸ್ನೇಹಿತರ ಜತೆ ತಂಗಿದ್ದ ದೇವಿಕಾ, ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದು ಧಾರವಾಡಕ್ಕೆ ಸೆಮಿನಾರ್‌ಗಾಗಿ ಬಂದಿದ್ದರು. ರಜಾ ದಿನದ ಕಾರಣ ಧಾರವಾಡದಿಂದ ದಾಂಡೇಲಿಗೆ ಪ್ರವಾಸಕ್ಕೆ ಆಗಮಿಸಿದ್ದರು.

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ದಾಂಡೇಲಿ ಸರಕಾರಿ ಆಸ್ಪತ್ರೆಯಲ್ಲಿ ಯುವತಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ

- Advertisement -

Latest News

error: Content is protected !!