Thursday, June 4, 2026
HomeUncategorizedರಾಜ್ಯದ ಇಂದಿನ ಕೊರೊನಾ ಅಂಕಿ ಅಂಶ..

ರಾಜ್ಯದ ಇಂದಿನ ಕೊರೊನಾ ಅಂಕಿ ಅಂಶ..

- Advertisement -
- Advertisement -

ಬೆಂಗಳೂರು : ರಾಜ್ಯದಲ್ಲಿ ಮತ್ತೆ ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆಯಾಗಿದೆ. ಇಂದು ಒಂದೇ ದಿನ ಬರೋಬ್ಬರಿ 6,259 ಪ್ರಕರಣಗಳು ವರದಿಯಾಗುವ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,45,830ಕ್ಕೆ ಏರಿಕೆಯಾಗಿದೆ. ಇಂದು ಕೋವಿಡ್ ಗೆ ರಾಜ್ಯದಲ್ಲಿ 110 ಮಂದಿ ಬಲಿಯಾಗೋದರ ಮೂಲಕ ಇದುವರೆಗೂ ಕೋವಿಡ್ ನಿಂದ ಸಾವನ್ನಪ್ಪಿದವರ ಸಂಖ್ಯೆ 2,704ಕ್ಕೇರಿದೆ.

ಇನ್ನು ರಾಜ್ಯದಲ್ಲಿ ಸದ್ಯ 73,846 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೂ 69,272 ಮಂದಿ ಗುಣಮುಖರಾಗಿದ್ದಾರೆ. ಇಂದು 6,777 ಮಂದಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

ಬೆಂಗಳೂರಿನಲ್ಲಿ ಇವತ್ತು 2035 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 63,033ಕ್ಕೇರಿದೆ. ಇಂದು 30 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಸದ್ಯ ರಾಜಧಾನಿಯಲ್ಲಿ 34,021 ಪಾಸಿಟಿವ್ ಪ್ರಕರಣಗಳಿದ್ದು,27,877 ಮಂದಿ ಗುಣಮುಖರಾಗಿದ್ದಾರೆ. ಅಲ್ಲದೇ ಇದುವರೆಗೂ 1134 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

- Advertisement -

Latest News

error: Content is protected !!