Wednesday, June 3, 2026
Homeಕರಾವಳಿಉಡುಪಿದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೆ ಹೆಚ್ಚಾಯ್ತು ಕೊರೊನಾ ಸೋಂಕಿತರ ಸಂಖ್ಯೆ, ಒಂದೇ ದಿನ 13 ಮಂದಿ ಬಲಿ,...

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೆ ಹೆಚ್ಚಾಯ್ತು ಕೊರೊನಾ ಸೋಂಕಿತರ ಸಂಖ್ಯೆ, ಒಂದೇ ದಿನ 13 ಮಂದಿ ಬಲಿ, ಉಡುಪಿಯಲ್ಲೂ ಮಹಾಮಾರಿಯ ಅಬ್ಬರ

- Advertisement -
- Advertisement -

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಹೆಚ್ಚಳವಾಗಿದೆ. ಇಂದು ಒಂದೇ ದಿನ ಬರೋಬ್ಬರಿ 225 ಪ್ರಕರಣಗಳು ವರದಿಯಾಗೋದರ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 6,388ಕ್ಕೆ ಏರಿಕೆಯಾಗಿದೆ. ಅಲ್ಲದೇ ಇವತ್ತು ಒಂದೇ ದಿನ 13 ಮಂದಿಯನ್ನು ಬಲಿ ಪಡೆದಿದೆ.

ಸದ್ಯ ಜಿಲ್ಲೆಯಲ್ಲಿ 3,290 ಸಕ್ರಿಯ ಪ್ರಕರಣಗಳಿದ್ದು, 2,918 ಮಂದಿ ಇದುವರೆಗೂ ಗುಣಮುಖರಾಗಿದ್ದಾರೆ. ಇವತ್ತು 73 ಮಂದಿ ಗುಣಮುಖರಾಗಿದ್ದಾರೆ.

ಹಾಗೇ ಉಡುಪಿಯಲ್ಲಿ ಇಂದು 170 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 4,969ಕ್ಕೆ ಏರಿಕೆಯಾಗಿದೆ. ಅಲ್ಲದೇ ಇಂದು 6 ಮಂದಿ ಕೊರೊನಾದಿಂದಾಗಿ ಸಾವನ್ನಪ್ಪುವ ಮೂಲಕ ಜಿಲ್ಲೆಯಲ್ಲಿ ಮಹಾಮಾರಿಗೆ ಬಲಿಯಾದವರ ಸಂಖ್ಯೆ 42ಕ್ಕೇರಿದೆ. ಸದ್ಯ ಜಿಲ್ಲೆಯಲ್ಲಿ 2,038 ಸಕ್ರಿಯ ಪಾಸಿಟಿವ್ ಪ್ರಕರಣಗಳಿದ್ದು, 2,889 ಮಂದಿ ಗುಣಮುಖರಾಗಿದ್ದಾರೆ.

- Advertisement -

Latest News

error: Content is protected !!