Thursday, June 4, 2026
Homeಮನರಂಜನೆಹಸೆಮಣೆ ಏರಲು ಸಜ್ಜಾದ ರಾಣಾ ದಗ್ಗುಬಾಟಿ, ನಾಳೆ ಹೈದರಾಬಾದಿನಲ್ಲಿ ಬಲ್ಲಾಳದೇವನ ವಿವಾಹ

ಹಸೆಮಣೆ ಏರಲು ಸಜ್ಜಾದ ರಾಣಾ ದಗ್ಗುಬಾಟಿ, ನಾಳೆ ಹೈದರಾಬಾದಿನಲ್ಲಿ ಬಲ್ಲಾಳದೇವನ ವಿವಾಹ

- Advertisement -
- Advertisement -

ಹೈದರಾಬಾದ್ : ಬಾಹುಬಲಿ ಚಿತ್ರದಲ್ಲಿ ಬಲ್ಲಾಳ ದೇವ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ್ದ ನಟ ರಾಣಾ ದಗ್ಗುಬಾಟಿ, ಶನಿವಾರದಂದು ತಮ್ಮ ಗೆಳತಿ ಮಿಹಿಕ ಬಜಾಜ್ ಅವರ ಜೊತೆ ವೈವಾಹಿಕ ಬದುಕಿಗೆ ಕಾಲಿಡಲಿದ್ದಾರೆ.

ಇವರ ವಿವಾಹಕ್ಕಾಗಿ ಅದ್ದೂರಿ ಸಿದ್ಧತೆ ನಡೆದಿದ್ದು, ಹೈದರಾಬಾದಿನ ಪ್ರತಿಷ್ಠಿತ ಬಂಜಾರ ಹಿಲ್ಸ್ ನಲ್ಲಿರುವ ರಾಣಾ ದಗ್ಗುಬಾಟಿ ಅವರ ನಿವಾಸ ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿದೆ.

ಕೊರೊನಾ ಕಾರಣಕ್ಕೆ ಕೇವಲ ಐವತ್ತು ಮಂದಿ ಅತಿಥಿಗಳ ಸಮ್ಮುಖದಲ್ಲಿ ಈ ವಿವಾಹ ಸಮಾರಂಭ ನಡೆಯಲಿದೆ ಎಂದು ತಿಳಿದು ಬಂದಿದೆ. ಆದರೂ ಅದ್ಧೂರಿ ಸಿದ್ಧತೆ ಮಾಡಿದ್ದು, ವಿವಾಹ ನಡೆಯುವ ಸ್ಥಳ ಹೂವಿನ ಅಲಂಕಾರದಿಂದ ಎಲ್ಲರ ಗಮನ ಸೆಳೆಯುತ್ತಿದೆ. ಈ ವಿವಾಹ ಸಮಾರಂಭಕ್ಕೆ ಚಿರಂಜೀವಿ, ರಾಮಚರಣ್, ಸಮಂತಾ, ನಾಗಚೈತನ್ಯ ಸೇರಿದಂತೆ ಹಲವು ನಟ-ನಟಿಯರು ಪಾಲ್ಗೊಳ್ಳಲಿದ್ದಾರೆ. ಸುರಕ್ಷತೆ ದೃಷ್ಟಿಯಿಂದ ವಿವಾಹ ಸಮಾರಂಭಕ್ಕೆ ಆಗಮಿಸುವ ಅತಿಥಿಗಳಿಗೆ ಕೊರೊನಾ ಟೆಸ್ಟ್ ಮಾಡಿಸಲಾಗುತ್ತದೆ ಎನ್ನಲಾಗಿದೆ.

- Advertisement -

Latest News

error: Content is protected !!