ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಗೆ ರಾಜ ಮರ್ಯಾದೆ ನೀಡುತ್ತಿರುವ ಫೋಟೋ ವೈರಲ್ ಆದ ಬೆನ್ನಲ್ಲೇ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತಂತೆ ತನಿಖೆಗೆ ಆದೇಶಿಸಿ ಗೃಹ ಸಚಿವ ಜಿ ಪರಮೇಶ್ವರ್ ಕಾರಾಗೃಹ ಇಲಾಖೆ ಡಿಜಿ ಮಾಲಿನಿ ಕೃಷ್ಣ ಮೂರ್ತಿಗೆ ಆದೇಶಿಸಿದ್ದರು.
ಇದರ ಬೆನ್ನಲ್ಲೇ ಇದೀಗ ನಟ ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಅನುಮತಿ ಕೋರಿ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಗೆ ಅಧಿಕಾರಿಗಳು ಮನವಿ ಸಲ್ಲಿಸಿದ್ದರು.
ಇದೀಗ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯವು ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಬಹುದು ಎಂಬ ಒಪ್ಪಿಗೆ ನೀಡಿದ್ದು ಉಳಿದ ಆರೋಪಿಗಳಿಗೂ ಕೂಡ ಬೇರೆ ಬೇರೆ ಕೇಂದ್ರ ಕಾರಾಗೃಹಗಳಿಗೆ ಶಿಫ್ಟ್ ಮಾಡಲು ಒಪ್ಪಿಗೆ ನೀಡಿದೆ.
ಮೈಸೂರು ಜೈಲಿಗೆ ಶಿಫ್ಟ್ ಪವನ್, ರಾಘವೇಂದ್ರ ಶಿಫ್ಟ್ ಆಗುತ್ತಿದ್ದರೆ ಮತ್ತು ನಂದೀಶ್, ಜಗದೀಶ್ , ಲಕ್ಷ್ಮಣ ಶಿವಮೊಗ್ಗ ಜೈಲಿಗೆ, ಧನರಾಜ ಧಾರವಾಡ ಸೆಂಟ್ರಲ್ ಜೈಲಿಗೆ, ವಿನಯ್ ವಿಜಯಪುರದ ಜೈಲಿಗೆ, ನಾಗರಾಜ್ ಕಲಬುರ್ಗಿ ಜೈಲಿಗೆ, ಬೆಳಗಾವಿ ಜಿಲ್ಲೆಗೆ ಪ್ರದೂಷ ಶಿಫ್ಟ್ ಆಗಲಿದ್ದಾರೆ.