- Advertisement -
![]()
- Advertisement -
ಬೆಳ್ತಂಗಡಿ; ಕಟೀಲು ಶ್ರೀ ದುರ್ಗಾ ಪರಮೇಶ್ವರೀ ಯಕ್ಷಗಾನ ಬಯಲಾಟ ಸೇವಾ ಸಮಿತಿ ಸವಣಾಲು ಶ್ರೀ ಕಟೀಲು ಮೇಳದವರಿಂದ 7ನೇ ವರ್ಷದ ನಳದಮಯಂತಿ ಎಂಬ ಪ್ರಸಂಗ ದಿನಾಂಕ 22-04-2025ನೇ ಮಂಗಳವಾರ ಸಂಜೆ ಗಂಟೆ 6.00 ರಿಂದ ರಾತ್ರಿ 12.30 ವರೆಗೆ ಸವಣಾಲು ಶ್ರೀ ದುರ್ಗಾಕಾಳಿಕಾಂಬ ದೇವಸ್ಥಾನದ ಕಾಳಿಬೆಟ್ಟ ಕ್ಷೇತ್ರದಲ್ಲಿ ನಡೆಯಲಿದೆ.
ಭಗವದ್ಭಕ್ತರು ಈ ಕಾರ್ಯಕ್ರಮದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀದೇವಿಯ ಕೃಪೆಗೆ ಪಾತ್ರರಾಗಿ ತನು-ಮನ-ಧನಗಳಿಂದ ಸಹಕರಿಸಿ ಈ ಕಲಾ ಸೇವೆಯನ್ನು ಚಂದಗಾಣಿಸಿಕೊಡಲು ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಬಯಲಾಟ ಸೇವಾ ಸಮಿತಿ, ಸವಣಾಲಿನ ಅಧ್ಯಕ್ಷರು, ಸಂಚಾಲಕರು ಮತ್ತು ಸಹಸಂಚಾಲಕರು ಹಾಗೂ ಸರ್ವ ಸದಸ್ಯರು ಮನವಿ ಮಾಡಿದ್ದಾರೆ.
- Advertisement -


