Monday, June 8, 2026
Homeತಾಜಾ ಸುದ್ದಿಬೆಳ್ತಂಗಡಿ : ಕಾರ್ಯಕ್ರಮಕ್ಕೆ ಹೋಗಿ ಹಿಂತಿರುಗಿವಾಗ ನಾಲ್ಕೂರು ಬಳಿ ಬೈಕ್ ಸ್ಕಿಡ್ ; ಗಂಭೀರ ಗಾಯಗೊಂಡ...

ಬೆಳ್ತಂಗಡಿ : ಕಾರ್ಯಕ್ರಮಕ್ಕೆ ಹೋಗಿ ಹಿಂತಿರುಗಿವಾಗ ನಾಲ್ಕೂರು ಬಳಿ ಬೈಕ್ ಸ್ಕಿಡ್ ; ಗಂಭೀರ ಗಾಯಗೊಂಡ ಸಹಸವಾರೆ ಮಹಿಳೆ ಸಾವು

- Advertisement -
- Advertisement -

ಬೆಳ್ತಂಗಡಿ  : ಬೈಕ್ ಸ್ಕಿಡ್ ಆಗಿ ಬಿದ್ದು ಸಹಸವಾರೆ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ನಾಲ್ಕೂರು ಗ್ರಾಮದ ಸೂಳಬೆಟ್ಟು ಸನಿಹ ಬೊಕ್ಕಸ ಬಸ್ ನಿಲ್ದಾಣದ ಬಳಿ ಏ.21 ರಂದು ತಡ ರಾತ್ರಿ ನಡೆದಿದೆ.

ಶಿರ್ಲಾಲುವಿನ ಗ್ರಾಮದಲ್ಲಿ ನಡೆಯುತ್ತಿರುವ ಶುಭ ಕಾರ್ಯಕ್ರಮಕ್ಕೆ ಪತಿ ಹರೀಶ್ ಜೊತೆ ಹೋಗಿ ವಾಪಾಸ್ ಬರುವಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಮೃತ ಮಹಿಳೆ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಕೊಡಿಮಜಲು ಹರೀಶ್ ಎಂಬವರ ಪತ್ನಿ ಪ್ರತಿಮಾ (37) ಎಂದು ತಿಳಿದು ಬಂದಿದೆ. ವೇಣೂರು ಪೋಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು ಏ.22 ರಂದು ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!