Wednesday, October 14, 2026
Homeತಾಜಾ ಸುದ್ದಿಪತ್ನಿ ಕಿರುಕುಳದಿಂದ ಬೇಸತ್ತು ಇಂಜಿನಿಯರ್ ನದಿಗೆ ಹಾರಿ ಆತ್ಮ*ಹತ್ಯೆ

ಪತ್ನಿ ಕಿರುಕುಳದಿಂದ ಬೇಸತ್ತು ಇಂಜಿನಿಯರ್ ನದಿಗೆ ಹಾರಿ ಆತ್ಮ*ಹತ್ಯೆ

- Advertisement -
- Advertisement -

ಹಾಸನ;  ಪತ್ನಿ ಕಿರುಕುಳದಿಂದ ಬೇಸತ್ತು ಇಂಜಿನಿಯರ್ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ತಾಲೂಕಿನ ಗೊರೂರು ಶೆಟ್ಟಿಹಳ್ಳಿಯಲ್ಲಿ ನಡೆದಿದೆ. ಇಂದಿರಾನಗರದ ನಿವಾಸಿ ಜೆಜೆ ಪ್ರಮೋದ್ ಮೃತ ವ್ಯಕ್ತಿ.

ಪ್ರಮೋದ್ ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ಕಿರುಕುಳಕ್ಕೆ ಬೇಸತ್ತು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರಮೋದ್ ಹಾಗೂ ಅವರ ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಪತ್ನಿಯ ತಮ್ಮಂದಿರು ಕೂಡ ಪ್ರಮೋದ್ ಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಡಿ.29 ರಿಂದ ಪ್ರಮೋದ್ ನಾಪತ್ತೆಯಾಗಿದ್ದರು. ನಂತರ ಹಾಸನದ ಕೆಆರ್ ಪುರಂ ಠಾಣೆಯಲ್ಲಿ ಪೋಷಕರು ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ಬಳಿಕ ಹುಡುಕಾಟ ನಡೆಸಿದಾಗ ಹೇಮಾವತಿ ಸೇತುವೆ ಬಳಿ ಪ್ರಮೋದ್ ಬೈಕ್ ಪತ್ತೆಯಾಗಿತ್ತು. ನಂತರ ಅಗ್ನಿಶಾಮಕ ದಳ ಹಾಗೂ ಪೊಲೀಸರು ಪರಿಶೀಲನೆ ನಡೆಸಿದಾಗ ನದಿಯಲ್ಲಿ ಪ್ರಮೋದ್ ಶವ ಪತ್ತೆಯಾಗಿದೆ.ಸ್ಥಳಕ್ಕೆ ಆಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!