Wednesday, June 3, 2026
Homeಕರಾವಳಿಮಂಗಳೂರು; ಆಯತಪ್ಪಿ ಪಾಳು ಬಾವಿಗೆ ಬಿದ್ದು ಮೀನುಗಾರ ಸಾವು

ಮಂಗಳೂರು; ಆಯತಪ್ಪಿ ಪಾಳು ಬಾವಿಗೆ ಬಿದ್ದು ಮೀನುಗಾರ ಸಾವು

- Advertisement -
- Advertisement -

ಮಂಗಳೂರು; ಆಯತಪ್ಪಿ ಪಾಳು ಬಾವಿಗೆ ಬಿದ್ದು ಮೀನುಗಾರ ಸಾವನ್ನಪ್ಪಿರುವ ಘಟನೆ ಉಳ್ಳಾಲದ ಸೋಮೇಶ್ವರ ಉಚ್ಚಿಲದ ರೆಸಾರ್ಟ್ ನ ಮುಂಭಾಗದಲ್ಲಿ ಜನವರಿ 1 ರಂದು ನಡೆದಿದೆ.ಉಚ್ಚಿಲ ವಾಝ್ಕೊ ರೆಸಾರ್ಟ್ ಬಳಿಯ ನಿವಾಸಿ ಶಶೀಂದ್ರ.ಎಮ್ ಉಚ್ಚಿಲ (75) ಮೃತ ವ್ಯಕ್ತಿ.

ಮೀನುಗಾರಿಕೆ ಮಾಡುತ್ತಿದ್ದ ಶಶೀಂದ್ರ ಸ್ನೇಹಿತನ ಜೊತೆ ರೆಸಾರ್ಟ್ ಮುಂಭಾಗದ ಪಾಳು ಬಿದ್ದ ಬಾವಿಯ ಕಟ್ಟೆಯಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದರು. ಆಗ ಆಯ ತಪ್ಪಿ ಬಾವಿಯೊಳಗೆ ಬಿದ್ದಿದ್ದಾರೆ ಎನ್ನಲಾಗಿದೆ. ಬಾವಿಯಲ್ಲಿ ಕೇವಲ ಮೂರಡಿಯಷ್ಟು ನೀರಿದ್ದ ಪರಿಣಾಮ ಶಶೀಂದ್ರ ಅವರ ತಲೆಗೆ ಗಂಭೀರ ಏಟು ತಗುಲಿ ಸಾವನ್ನಪ್ಪಿದ್ದಾರೆ. ಸ್ಥಳೀಯರು ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ.
ಉಳ್ಳಾಲ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

- Advertisement -

Latest News

error: Content is protected !!