Sunday, February 16, 2025
HomeUncategorizedಹಾಸನ : ಪ್ರಿಯಕರನಿಗೆ ಚಾಕುವಿನಿಂದ ಇರಿದ ಪ್ರಿಯತಮೆ

ಹಾಸನ : ಪ್ರಿಯಕರನಿಗೆ ಚಾಕುವಿನಿಂದ ಇರಿದ ಪ್ರಿಯತಮೆ

spot_img
- Advertisement -
- Advertisement -

ಹಾಸನ : ಪ್ರಿಯಕರನಿಗೆ ಪ್ರಿಯತಮೆ ಚಾಕುವಿನಿಂದ ಇರಿದ ಘಟನೆ ಹಾಸನ ನಗರದ ಬಿ.ಎಂ. ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ ಗೇಟ್‌ನಲ್ಲಿ ಡಿ. 31ರ ತಡರಾತ್ರಿ ನಡೆದಿದೆ.

ಮನುಕುಮಾರ್ (25) ಪ್ರೇಯಸಿಯಿಂದ ಚಾಕು ಇರಿತಕ್ಕೊಳಗಾದ ಪ್ರಿಯಕರ.ಭವಾನಿ ಚಾಕುವಿನಿಂದ ಇರಿದ ಯುವತಿ.

ಹಾಸನ ತಾಲ್ಲೂಕಿನ, ಎ.ಗುಡುಗನಹಳ್ಳಿ ಗ್ರಾಮದ ಮನುಕುಮಾರ್ ಹಾಗೂ ಭವಾನಿ ಜೊತೆಯಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದರು. ಮನುಕುಮಾರ್ ಹಾಗೂ ಭವಾನಿ ಪರಸ್ಪರ ಪ್ರೀತಿಸುತ್ತಿದ್ದರು.

ಕೆಲ ದಿನಗಳಿಂದ ಇಬ್ಬರು ದೂರವಾಗಿದ್ದರು.
ನಿನ್ನೆ ರಾತ್ರಿ ಹೊಸ ವರ್ಷಾಚರಣೆಗೆ ಸ್ನೇಹಿತರ ಜೊತೆ ಖಾಸಗಿ ಹೋಟೆಲ್‌ಗೆ ಮನುಕುಮಾರ್ ಬಂದಿದ್ದ. ಈ ವೇಳೆ ಮನುಕುಮಾರ್‌ಗೆ ಭವಾನಿ ಪದೇ ಪದೇ
ಫೋನ್ ಮಾಡುತ್ತಿದ್ದಾಳೆ.

ಭವಾನಿತಡರಾತ್ರಿ 12.30 ಕ್ಕೆ ಹೋಟೆಲ್ ಬಳಿ ಬಂದಿದ್ದಾಳೆ. ಅಲ್ಲೇ ಬಿದ್ದಿದ್ದ ಪಾಸ್ ಹಾಕಿಕೊಂಡು ಗೇಟ್ ಒಳಗೆ ಭವಾನಿ ಹೋಗಿದ್ದಾಳೆ. ಅಷ್ಟರಲ್ಲಿ ಗೇಟ್ ಬಳಿ ಮನುಕುಮಾರ್ ಬಂದಿದ್ದಾನೆ. ಆಗ ಭವಾನಿ ಹಾಗೂ ಮನುಕುಮಾರ್ ನಡುವೆ ಜಗಳ ಶುರುವಾಗಿದೆ.

ಮನುಕುಮಾರ್ ಸ್ನೇಹಿತರು ಜಗಳ ಬಿಡಿಸುತ್ತಿದ್ದರು. ಈ ವೇಳೆ ಏಕಾಏಕಿ ಚಾಕುವಿನಿಂದ ಮನುಕುಮಾರ್‌ಗೆ ಭವಾನಿ ಇರಿದಿದ್ದಾಳೆ. ಕೂಡಲೇ ಜಿಲ್ಲಾಸ್ಪತ್ರಗೆ ಸ್ನೇಹಿತರು ದಾಖಲಿಸಿದ್ದಾರೆ. ಸದ್ಯ ಮನುಕುಮಾರ್ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮನುಕುಮಾರ್ ಹಾಸನದಲ್ಲಿ ಹಾರ್ಡ್‌ವೇರ್ ಮತ್ತು ಪ್ಲೇವುಡ್ ಅಂಗಡಿ ಇಟ್ಟುಕೊಂಡಿದ್ದ. ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!