- Advertisement -
![]()
- Advertisement -
ಪುತ್ತೂರು: ಬಂಟಾಜೆ ರಕ್ಷಿತಾರಣ್ಯದಿಂದ ಬೆಲೆಬಾಳುವ ಮರಗಳ ತೊಗಟೆ ಕೆತ್ತಿ ಸಾಗಿಸುತ್ತಿದ್ದ ಮೂವರನ್ನು ಪುತ್ತೂರು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ.ಕಾಸರಗೋಡು ಜಿಲ್ಲೆಯ ಬದಿಯಡ್ಕದ ಸುನಿಲ್ ಕುಮಾರ್, ಸುರೇಶ್, ದಿನೇಶ್ ಬಂಧಿತ ಆರೋಪಿಗಳು.
ಆರೋಪಿಗಳು ಬನ್ಪು, ಅಂಡಿಪುನರ್, ಬೇಂಗ ಜಾತಿಯ ಮರಗಳ ತೊಗಟೆಯನ್ನು ಕೆತ್ತಿ ಕೊಂಡೊಯ್ದಿದ್ದಾರೆ ಎನ್ನಲಾಗಿದೆ. ತೊಗಟೆ ಕೆತ್ತುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬಂದಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂದಿಸಿದ್ದಾರೆ.ಬಂಧಿತರನ್ನು ಶನಿವಾರ (ಶ.31) ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
- Advertisement -


