Friday, June 26, 2026
Homeತಾಜಾ ಸುದ್ದಿಹೆಬ್ಬಾವಿನ ಮುಂದೆ ಸೋಲೊಪ್ಪಿಕೊಂಡ ಹುಲಿ.. ವೈರಲ್ ಆಯ್ತು ವಿಡಿಯೋ

ಹೆಬ್ಬಾವಿನ ಮುಂದೆ ಸೋಲೊಪ್ಪಿಕೊಂಡ ಹುಲಿ.. ವೈರಲ್ ಆಯ್ತು ವಿಡಿಯೋ

- Advertisement -
- Advertisement -

ನಾವೆಲ್ಲಾ ಹೆಬ್ಬಾವು ಕೋಳಿನೋ, ಇಲ್ಲಾ ಆಡನ್ನೋ ತಿಂದರೋ ವಿಡಿಯೋವನ್ನು ನೋಡಿರ್ತೀವಿ. ಆದರೆ ಹೆಬ್ಬಾವೊಂದು ಹುಲಿಯನ್ನೇ ಹೆದರಿಸುತ್ತೆ ಅಂದ್ರೆ ನಂಬೋದಕ್ಕೆ ಕಷ್ಟ ಆಗುತ್ತೆ ಅಲ್ವಾ? ನಂಬೋದಕ್ಕೆ ಕಷ್ಟ ಆದ್ರೂ ಉದು ನಿಜ. 2018 ರಲ್ಲಿ ನಡೆದ ಈ ಘಟನೆ ಇದೀಗ ವೈರಲ್ ಆಗಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅರಣ್ಯದೊಳಗಿನ ರಸ್ತೆಯ ಮೇಲೆ ಹುಲಿ ತನ್ನ ಪಾಡಿಗೆ ತಾನು ರಾಜಗಾಂಭೀರ್ಯದಿಂದ ನಡೆದು ಹೋಗುತ್ತಿತ್ತು. ಇದ್ದಕ್ಕಿದಂತೆ ದಾರಿಯಲ್ಲಿ ಅಡ್ಡಲಾಗಿ ಹೆಬ್ಬಾವು ಎದುರಾಗಿದೆ. ಇದನ್ನು ನೋಡಿ ಏನು ಮಾಡೋದು ಅಂತಾ ಗೊಂದಲಕ್ಕೆ ಒಳಗಾಗಿದೆ ಹುಲಿ.

ಇನ್ನು ಹುಲಿ ಹಾವಿನ ಸುತ್ತಲೂ ಎಚ್ಚರಿಕೆಯಿಂದ ಹೆಜ್ಜೆಹಾಕಿ ಕುತೂಹಲದಿಂದ ನೋಡುವುದನ್ನು ವಿಡಿಯೊದಲ್ಲಿ ಕಾಣಬಹುದು. ನಂತರ ಹುಲಿಯು ರಸ್ತೆಯ ಪಕ್ಕದ ಕೆಲವು ಪೊದೆಗಳತ್ತ ಸರಿದು ಮತ್ತೆ ಹಾವಿನ ಬಳಿಗೆ ಬರುತ್ತದೆ. ಬಳಿಕ ಹೆಬ್ಬಾವು ಹುಲಿಯತ್ತ ಸಮೀಪಿಸಲು ಪ್ರಾರಂಭಿಸಿದಾಗ ಹುಲಿ ಹಾವನ್ನು ಸುತ್ತುವರಿದು ಪೊದೆಯ ಹಿಂದೆ ನಿಂತು ನೋಡಿ ಬಳಿಕ ಹಾವಿನ ಬಗ್ಗೆ ನಿರಾಸಕ್ತಿ ಹೊಂದಿದಂತೆ ಕಂಡು ಮುಂದಕ್ಕೆ ಸಾಗುತ್ತದೆ.

ಈ ವಿಡಿಯೊವನ್ನು ಕಬಿನಿಯ ಎವಾಲ್ವ್ ಬ್ಯಾಕ್ ರೆಸಾರ್ಟ್ಸ್‌ನಲ್ಲಿ ಪರಿಸರ ಪ್ರೇಮಿ ಶರತ್ ಅಬ್ರಹಾಂ ಎಂಬುವರು ಚಿತ್ರೀಕರಿಸಿದ್ದಾರೆ. ಅವರ ಪ್ರಕಾರ, ಆಗಸ್ಟ್ 31, 2018 ರಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಮೀಸಲು ಪ್ರದೇಶದಲ್ಲಿ ಹಾವು ಮತ್ತು ಹುಲಿಯ ನಡುವಿನ ಘಟನೆಯನ್ನು ಚಿತ್ರೀಕರಿಸಲಾಗಿದೆ. ಇನ್ನು ಹೆಬ್ಬಾವಿಗೆ ದಾರಿ ಬಿಟ್ಟ ಹುಲಿ’ ಎಂದು ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಟ್ವಿಟರ್‌ನಲ್ಲಿ ಬರೆದುಕೊಂಡು, ಈ ವಿಡಿಯೊ ಶೇರ್ ಮಾಡಿದ್ದಾರೆ.

- Advertisement -

Latest News

error: Content is protected !!