Friday, June 26, 2026
Homeಕರಾವಳಿಉಡುಪಿಉಡುಪಿಯಲ್ಲಿ ಹುಲಿ ಕುಣಿತ ವೇಳೆ ವೇಷಧಾರಿಗೆ ಆವೇಶ

ಉಡುಪಿಯಲ್ಲಿ ಹುಲಿ ಕುಣಿತ ವೇಳೆ ವೇಷಧಾರಿಗೆ ಆವೇಶ

- Advertisement -
- Advertisement -

ಉಡುಪಿ: ಶ್ರೀ ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಹುಲಿ ವೇಷ ಕುಣಿತದ ವೇಳೆ ವೇಷಧಾರಿಗೆ ಮೈಯಲ್ಲಿ ಆವೇಶ ಬಂದ ಘಟನೆ ಉಡುಪಿಯಲ್ಲಿ ನಡೆದಿದೆ.

ನಿಟ್ಟೂರು ಹುಲಿವೇಷ ಸ್ಪರ್ಧೆಯ ವೇದಿಕೆಯಲ್ಲಿ ಈ ಘಟನೆ ನಡೆದಿದ್ದು, ಕಾರ್ಯಕ್ರಮದ ವೇದಿಕೆಗೆ ಹಾಕಿದ್ದ ನೆಲ ಹಾಸನ್ನು ಕಚ್ಚಿ ಹರಿದು ಹುಲಿ ವೇಷಧಾರಿ ಆವೇಶಗೊಂಡಿದ್ದಾರೆ.ಈ ವೇಳೆ ಆವೇಶಗೊಂಡಿದ್ದ ವೇಷಧಾರಿಯನ್ನು ನಿಯಂತ್ರಿಸಲು ಸಹ ವೇಷಧಾರಿಗಳು ಹರಸಾಹಸ ಪಟ್ಟಿದ್ದಾರೆ.

ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಇಂದು ಉಡುಪಿ ಜಿಲ್ಲೆಯ ಹಲವೆಡೆ ಹುಲಿ ವೇಷ ಕುಣಿತ ಆಯೋಜನೆಗೊಂಡಿದೆ.‌

- Advertisement -

Latest News

error: Content is protected !!