ಸುಳ್ಯದ ಸ್ಕಾರ್ಫಿಯೋ ಸಾವಿಗೀಡಾಗಿದ್ದ ಧಾರವಾಡದ ಹೊನ್ನೇನಹಳ್ಳಿ ಮೂಲದ ಕಾರ್ಮಿಕ ಅಣ್ಣಪ್ಪ(37) ಅವರ ಅಂತ್ಯಕ್ರಿಯೆ ಸುಳ್ಯದಲ್ಲಿಯೇ ನೆರವೇರಿತು.
ಮಂಗಳವಾರ ರಾತ್ರಿ ಅಣ್ಣಪ್ಪ ಅವರು ಊಟ ಮುಗಿಸಿಕೊಂಡು ಹಿಂತಿರುಗಿ ಹೋಗುತ್ತಿದ್ದ ವೇಳೆ ಸ್ಕಾರ್ಫಿಯೋ ಡಿಕ್ಕಿಯಾಗಿತು. ಡಿಕ್ಕಿಯ ರಭಸಕ್ಕೆ ಅಣ್ಣಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದರು, ಮೃತದೇಹವನ್ನು ಸುಳ್ಯದ ಸರಕಾರಿ ಆಸ್ಪತ್ರೆಗೆ ತಂದು ಶವ ಪರೀಕ್ಷೆ ನಡೆಸಲಾಗಿತ್ತು.
ಮೃತ ಕಾರ್ಮಿಕನ ಕುಟುಂಬಸ್ಥರು ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಊರಿನಲ್ಲಿ ವ್ಯವಸ್ಥೆ ಇಲ್ಲವೆಂದು ಸುಳ್ಯದ ರುದ್ರಭೂಮಿಯಲ್ಲಿ ಕೂಲಿ ಕಾರ್ಮಿಕನ ಅಂತ್ಯಕ್ರಿಯೆಯನ್ನು ನಡೆಸಲಾಯಿತು. ಇಬ್ಬರು ಮಕ್ಕಳ ಜೊತೆಗೆ ಕಣ್ಣೀರಿಡುತ್ತಾ ಅಂತ್ಯಕ್ರಿಯೆಯಲ್ಲಿ ಅಣ್ಣಪ್ಪ ಅವರ ಪತ್ನಿ ರೂಪ ಪಾಲ್ಗೊಂಡಿದ್ದರು. ಕೇವಲ 4 ತಿಂಗಳ ಹಿಂದೆ ಅಣ್ಣಪ್ಪ ಸುಳ್ಯಕ್ಕೆ ಕೆಲಸ ಅರಸಿಕೊಂಡು ಬಂದಿದ್ದರು. ಶವ ಸಂಸ್ಕಾರಕ್ಕೆ ಪ್ರಗತಿ ಆಂಬುಲೆನ್ಸ್ ಅಚ್ಚು, ಪ್ರಕಾಶ್ ಪೊಲೀಸ್ ಸುಳ್ಯ, ಗುರುವ ಸಹಕರಿಸಿದರು.