Wednesday, June 3, 2026
Homeಕರಾವಳಿಮಂಗಳೂರುಬಂಟ್ವಾಳ;  ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಳ್ಳತನ ಆರೋಪಿಗಳು ಅಂದರ್

ಬಂಟ್ವಾಳ;  ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಳ್ಳತನ ಆರೋಪಿಗಳು ಅಂದರ್

- Advertisement -
- Advertisement -

ಬಂಟ್ವಾಳ;  ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಳ್ಳತನ ಆರೋಪಿಗಳನ್ನು  ಪೊಲೀಸರು ಬಂಧಿಸಿದ್ದಾರೆ.ಕಾಸರಗೋಡಿನ ಬಶೀರ್ ಕೆ ಪಿ, ಕೇರಳದ ಕೊಲ್ಲಂ ಜಿಲ್ಲೆಯ ಪ್ರಕಾಶ್ ಬಾಬು @  ಮಹಮ್ಮದ್ ನಿಯಾಝ್,  ಬಂಟ್ವಾಳ ತಾಲೂಕಿನ ಪುದು ಗ್ರಾಮದ ಎಫ್. ಜೆ. ಮಹಮ್ಮದ್ ಇಸ್ಮಾಯಿಲ್  ಬಂಧಿತ ಆರೋಪಿಗಳು. ಆರೋಪಿಗಳನ್ನು ಬಂಟ್ವಾಳ ತಾಲೂಕು ಇರಾ  ಎಂಬಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ . ಬಂಧಿತರಿಂದ ರೂ 1,25,000/-ಮೌಲ್ಯದ ಬೆಳ್ಳಿಯ ಆಭರಣಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಕಾರು ವಶಪಡಿಸಲಾಗಿದೆ.

ಕಾರ್ಯಾಚರಣೆಯಲ್ಲಿ ದ.ಕ. ಜಿಲ್ಲಾ ಪೊಲೀಸ್ ಆಧೀಕ್ಷಕರಾದ ಶ್ರೀ ಯತೀಶ್ ಎನ್, ಐ.ಪಿ.ಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ರಾಜೇಂದ್ರ ಡಿಎಸ್ ರವರ ಮಾರ್ಗದರ್ಶನದಲ್ಲಿ, ಬಂಟ್ವಾಳ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಎಸ್ ವಿಜಯಪ್ರಸಾದ್ ರವರ ನೇತೃತ್ವದ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಶಿವಕುಮಾರ ಬಿ ಮತ್ತು ಪಿಎಸ್‌ಐ ಗಳಾದ ಶ್ರೀ ನಂದ ಕುಮಾರ್ ಪಿಎಸ್‌ಐ ಪೂಂಜಾಲಕಟ್ಟೆ ಪೊಲೀಸ್ ಠಾಣೆ, ಶ್ರೀ ಹರೀಶ್ ಎಮ್ ಆರ್ ಬಂಟ್ವಾಳ ಗ್ರಾಮಾಂತರ ಠಾಣೆ, ಶ್ರೀ ಲೋಲಾಕ್ಷ ಪಿಎಸ್‌ಐ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ, ಹಾಗೂ ಸಿಬ್ಬಂಧಿಗಳಾದ ಉದಯ ರೈ, ಪ್ರವೀಣ್ ಎಮ್, ಅದ್ರಾಮ, ಹರಿಶ್ಚಂದ್ರ, ನಝೀರ್, ಕೃಷ್ಣ ನಾಯ್ಕ್, ಸಂತೋಷ್, ರಾಹುಲ್ ರಾವ್, ಅಶೋಕ್, ವಿವೇಕ್ ಕೆ,  ಕುಮಾರ್ ಹೆಚ್.ಕೆ, ಬಸವರಾಜ್, ರಮ್‌ಜಾನ್, ಕುಮಾರ, ಮಹಾಂತೇಶ್ ಮತ್ತು ಜಿಲ್ಲಾ ಗಣಕಯಂತ್ರ ವಿಭಾಗದ ಸಂಪತ್, ದಿವಾಕರ ರವರುರವರನ್ನೊಳಗೊಂಡ ತಂಡ ಪಾಲ್ಗೊಂಡಿರುತ್ತದೆ.

- Advertisement -

Latest News

error: Content is protected !!